ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಉಚಿತವಾಗಿ ಸಿಗಬೇಕು: ಅಕ್ಷಯ್ ಕುಮಾರ್

ತಮ್ಮ ಮುಂಬರುವ ಚಿತ್ರ 'ಪ್ಯಾಡ್ ಮ್ಯಾನ್'ನಲ್ಲಿ ಋತುಸ್ರಾವದ ದಿನಗಳಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಪರಿಚಯಿಸಿರುವ....
ಪ್ಯಾಡ್ ಮ್ಯಾನ್ ಚಿತ್ರದ ಸ್ಟಿಲ್
ಪ್ಯಾಡ್ ಮ್ಯಾನ್ ಚಿತ್ರದ ಸ್ಟಿಲ್
ಮುಂಬೈ: ತಮ್ಮ ಮುಂಬರುವ ಚಿತ್ರ 'ಪ್ಯಾಡ್ ಮ್ಯಾನ್'ನಲ್ಲಿ ಋತುಸ್ರಾವದ ದಿನಗಳಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಪರಿಚಯಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು, ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಉಚಿತವಾಗಿ ಸಿಗಬೇಕು. ಇದೊಂದು ಮೂಲಭೂತ ಸೌಲಭ್ಯ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಸ್ಯಾನಿಟರಿ ನ್ಯಾಪ್ಕಿನ್ ಮೇಲಿನ ಜಿಎಸ್ ಟಿ ಕಡಿತಗೊಳಿಸಬೇಕೆ? ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಕ್ಷಯ್ ಕುಮಾರ್ ಅವರು, ಕೇವಲ ಜಿಎಸ್ ಟಿ ಕಡಿತ ಏಕೆ? ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಉಚಿತವಾಗಿ ಸಿಗಬೇಕು ಎಂದು ನಾನು ಬಯಸುತ್ತೇನೆ ಮತ್ತು ಇದು ಅವರ ಮೂಲಭೂತ ಸೌಲಭ್ಯಗಳಲ್ಲಿ ಒಂದು. ಇದು ಋತುಚಕ್ರದ ಆರೋಗ್ಯಕ್ಕಾಗಿ ಅಷ್ಟೆ. ಐಷಾರಾಮಿ ಅಲ್ಲ ಎಂದರು.
ದೇಶದಲ್ಲಿ ಶೇ.82ರಷ್ಟು ಮಹಿಳೆಯರು ಸ್ಯಾನಿಟರಿ ನ್ಯಾಪ್ಕಿನ್ ಬಳಸುತ್ತಿಲ್ಲ ಎಂದು ಹೇಳುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಮತ್ತು ಇದೊಂದು ದುರದೃಷ್ಟಕರ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಪ್ಯಾಡ್ ಮ್ಯಾನ್ ಚಿತ್ರ ಮಹಿಳೆಯರ ಋತುಸ್ರಾವದ ಸಮಸ್ಯೆಗಳನ್ನು ಹೇಳುವ ಸಿನಿಮಾವಾಗಿದ್ದು, ಅತಿ ಕಡಿಮೆ ವೆಚ್ಚದಲ್ಲಿ ನ್ಯಾನಿಟರಿ ನ್ಯಾಪ್ಕಿನ್ ತಯಾರಿಸುವ ವ್ಯಕ್ತಿಯಾಗಿ ಅಕ್ಷಯ್ ಕುಮಾರ್ ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com