ಗಾಡ್ ಸೆಕ್ಸ್ ಆಂಡ್ ಟ್ರೂತ್ ಚಿತ್ರ ವಿವಾದ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ

ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ ತಮ್ಮ ನಿರೀಕ್ಷಿತ ಚಿತ್ರ 'ಗಾಡ್ ಸೆಕ್ಸ್ ಆಂಡ್ ಟ್ರುತ್' ನಲ್ಲಿ ಅಶ್ಲೀಲತೆಯನ್ನು ವಿಜ್ರಂಭಣೆಯಿಂದ ತೋರಿಸಿದ್ದಾರೆ ಎಂದು ಆರೋಪಿಸಿ..........
ಚಿತ್ರೀಕರಣದ ದೃಶ್ಯ
ಚಿತ್ರೀಕರಣದ ದೃಶ್ಯ
Updated on
ಹೈದರಾಬಾದ್: ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ ತಮ್ಮ ನಿರೀಕ್ಷಿತ ಚಿತ್ರ 'ಗಾಡ್ ಸೆಕ್ಸ್ ಆಂಡ್ ಟ್ರುತ್'  ನಲ್ಲಿ ಅಶ್ಲೀಲತೆಯನ್ನು ವಿಜ್ರಂಭಣೆಯಿಂದ ತೋರಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರು ಹೈದರಾಬಾದ್ ಪೋಲೀಸರಿಗೆ ದೂರು ನೀಡಿದ್ದಾರೆ. 
ವಿದ್ಯುನ್ಮಾನ ಮಾದ್ಯಮದಲ್ಲಿ ಅಶ್ಲೀಲ ದೃಷ್ಯಗಳ ಪ್ರಕಟಣೆ, ಪ್ರಸಾರದ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆ, 2000ದಡಿಯಲ್ಲಿ ವರ್ಮಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತೆ ದೇವಿ ಮತ್ತು ಇತರರು ಸೆಂಟ್ರಲ್ ಕ್ರೈಮ್ ಸ್ಟೇಷನ್ ಗೆ ದೂರಿತ್ತಿದ್ದು ಸಾಮಾಜಿಕ ಜಾಲತಾಣಗಲಲ್ಲಿ ವರ್ಮಾ ಪೋಸ್ಟ್ ಮಾಡಿದ ಕೆಲವು ಚಿತ್ರಗಳೊಡನೆ ದೂರು ಸಲ್ಲಿಸಲಾಗಿದೆ.. ಇದಲ್ಲದೆ ಚಿತ್ರದ ವಿರುದ್ಧವಾಗಿ ಮಾತನಾಡಿದವರ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಿರುವ ವರ್ಮಾ ಮಹಿಳೆಯರ ಗೌರವಕ್ಕೆ ಚ್ಯುತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಸಂಬಂಧ ನಿರ್ದೇಶಕರ  ವಿರುದ್ಧ ಐಪಿಸಿ ಸೆಕ್ಷನ್ 506 ಹಾಗೂ 509ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣ ಸಂಬಂಧ ಹೆಚ್ಚಿನ ಕ್ರಮ ಕೈಗೊಳ್ಳುವ ಮೊದಲು ಕಾನೂನು ಪಂಡಿತರ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಆ ನಂತರ ತನಿಖೆ ಮುಂದುವರಿಯಲಿದೆ ಎಂದು ಪೋಲೀಸರು ಹೇಲಿದ್ದಾರೆ.
ಅಮೆರಿಕಾದ ಪೋರ್ನ್ ತಾರೆ ಮಿಯಾ ಮಲ್ಕೋವಾ ಅಭಿನಯವಿರುವ 'ಗಾಡ್ ಸೆಕ್ಸ್ ಅಂಡ್ ಟ್ರುತ್' ಚಿತ್ರ ಪ್ರಾರಂಬದಿಂಡಲೂ ಸಾಕಷ್ಟು ವಿವಾದ ಸೃಷ್ಟಿ ಮಾಡಿದ್ದು  ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಕ್ಷಣದಿಂದಲೂ ವರ್ಮಾ ಮಹಿಳಾ ಸಂಘಟನೆಗಳಿಂದ ಭಾರೀ ಪ್ರತಿರೋಧವನ್ನು ಎದುರಿಸಬೇಕಾಗಿತ್ತು.  ಚಿತ್ರವು ನಾಳೆ ತೆರೆ ಮೇಲೆ ಬರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com