ಪದ್ಮಾವತ್ ಚಿತ್ರ ನೋಡಿದ ಪೋಷಕರು ನನ್ನ ಬಗ್ಗೆ ಹೆಮ್ಮೆಪಟ್ಟಿದ್ದಾರೆ: ದೀಪಿಕಾ ಪಡುಕೋಣೆ

ಪದ್ಮಾವತ್ ಚಿತ್ರಕ್ಕೆ ಸಂಬಂಧಪಟ್ಟಂತೆ ಅನೇಕ ವಿವಾದ, ಬೆದರಿಕೆಗಳನ್ನು ಎದುರಿಸಿದ ನಟಿ ದೀಪಿಕಾ ಪಡುಕೋಣೆ...
ಪದ್ಮಾವತ್ ಚಿತ್ರದ ಯಶಸ್ಸಿನ ಆಚರಣೆ ವೇಳೆ ರಾಜಸ್ತಾನಿ ತಿನಿಸನ್ನು ಸವಿಯುತ್ತಿರುವ ನಟಿ ದೀಪಿಕಾ ಪಡುಕೋಣೆ
ಪದ್ಮಾವತ್ ಚಿತ್ರದ ಯಶಸ್ಸಿನ ಆಚರಣೆ ವೇಳೆ ರಾಜಸ್ತಾನಿ ತಿನಿಸನ್ನು ಸವಿಯುತ್ತಿರುವ ನಟಿ ದೀಪಿಕಾ ಪಡುಕೋಣೆ
ಮುಂಬೈ: ಪದ್ಮಾವತ್ ಚಿತ್ರಕ್ಕೆ ಸಂಬಂಧಪಟ್ಟಂತೆ ಅನೇಕ ವಿವಾದ, ಬೆದರಿಕೆಗಳನ್ನು ಎದುರಿಸಿದ ನಟಿ ದೀಪಿಕಾ ಪಡುಕೋಣೆ, ವಿವಾದದ್ದುಕ್ಕೂ ವಿಶ್ವಾಸದಿಂದಿದ್ದೆ. ಇದಕ್ಕೆ ತಮ್ಮ ತಂದೆ-ತಾಯಿ ಬೆಳೆಸಿದ ರೀತಿ ಕಾರಣ. ಚಿತ್ರ ವೀಕ್ಷಿಸಿದ ನಂತರ ತಂದೆ-ತಾಯಿ ಬಹಳ ಹೆಮ್ಮೆಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಮುಂಬೈಯ ಮರ್ವರಿ ತಾಲಿಯಲ್ಲಿ ಆಯ್ದ ಮಾಧ್ಯಮದವರೊಂದಿಗೆ ಮಾತನಾಡಿದ ದೀಪಿಕಾ ಪಡುಕೋಣೆ ಪದ್ಮಾವತ್ ಚಿತ್ರ ಬಿಡುಗಡೆಯಾದ ನಂತರ ಇನ್ನಷ್ಟು ನಿರಾಳವಾಗಿರುವಂತೆ ಕಂಡುಬಂದರು. 
''ನನ್ನ ಪೋಷಕರು ತುಂಬಾ ಖುಷಿಪಟ್ಟಿದ್ದಾರೆ. ಅವರ ಮುಖದಲ್ಲಿ ಹೆಮ್ಮೆ ಕಾಣಿಸುತ್ತಿತ್ತು. ಚಿತ್ರ ನೋಡಿದ ನಂತರ ನನ್ನ ತಂದೆ-ತಾಯಿ ವಿಡಿಯೊ ಕಾಲ್ ಮಾಡಿದರು. ಆಗ ನಾನು ಪೈಜಾಮ ತೊಟ್ಟು ಮಲಗಲು ಸಿದ್ದತೆ ಮಾಡಿಕೊಳ್ಳುತ್ತಿದ್ದೆ. ಅವರು ಸಿನಿಮಾ ಮತ್ತು ನನ್ನನ್ನು ಮಾತ್ರ ನೋಡಿದ್ದಾರೆ. ಇವಳು ನಮ್ಮ ಮಗಳೇ ಎಂಬ ಭಾವನೆ ಚಿತ್ರ ನೋಡಿದ ನಂತರ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಅವರ ಮುಖ ಹೊಳೆಯುತ್ತಿತ್ತು ಮತ್ತು ಹೆಮ್ಮೆ ಕಾಣುತ್ತಿತ್ತು ಎಂದು ದೀಪಿಕಾ ಹೇಳುತ್ತಾರೆ.
ಪದ್ಮಾವತ್ ಚಿತ್ರ ಬಿಡುಗಡೆಯನ್ನು ವಿರೋಧಿಸಿ ರಜಪೂತ ಕರ್ಣಿ ಸೇನಾದಿಂದ ತೀವ್ರ ವಿರೋಧ ಎದುರಿಸಬೇಕಾಯಿತು. ಈ ನಡುವೆ ದೀಪಿಕಾ ಯಾವುದೇ ಪತ್ರಿಕಾಗೋಷ್ಠಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ.
ಇದಕ್ಕೆಲ್ಲಾ ಕಾರಣ ತಮ್ಮ ಪೋಷಕರು ಎಂದು ದೀಪಿಕಾ ಹೇಳುತ್ತಾರೆ. ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದರೂ ಪೋಷಕರು ನಿನ್ನ ಜೊತೆ ಬಂದಿರಬೇಕೆ? ಕಷ್ಟವಾಗುತ್ತಿದೆಯೇ ಎಂದು ಕೇಳಲಿಲ್ಲ. ಏಕೆಂದರೆ ಪರಿಸ್ಥಿತಿಯನ್ನು ನಾನು ನಿಭಾಯಿಸುತ್ತೇನೆ ಎಂಬ ವಿಶ್ವಾಸ ಅವರಲ್ಲಿತ್ತು. ಅದು ನನ್ನಲ್ಲಿನ ಉತ್ಸಾಹ ಹೆಚ್ಚಲು ಕಾರಣವಾಗಿದೆ. ಅದೇ ರೀತಿ ನನ್ನನ್ನು ಮತ್ತು ನನ್ನ ಸೋದರಿಯನ್ನು ಪೋಷಕರು ಬೆಳೆಸಿದ್ದಾರೆ. ತಪ್ಪು ಮಾಡಿದರೆ ತಪ್ಪು ಎಂದು ಹೇಳಿ ತಿದ್ದುತ್ತಾರೆ ಎನ್ನುತ್ತಾರೆ ದೀಪಿಕಾ. 
ಪದ್ಮಾವತ್ ಚಿತ್ರದಲ್ಲಿ 16ನೇ ಶತಮಾನದ ಕವಿ ಮಲಿಕ್ ಮುಹಮ್ಮದ್ ಜಯಸಿ ಅವರ ಕವಿತೆ ಪದ್ಮಾವತ್ ನ್ನು ತೆಗೆದುಕೊಂಡು ಸಿನಿಮಾ ಮಾಡಲಾಗಿದ್ದು, ಆ ಪಾತ್ರವನ್ನು ಅಭಿನಯಿಸಲು ನನಗೆ ತುಂಬಾ ಖುಷಿಯಾಗಿದೆ. ರಾಣಿ ಪದ್ಮಾವತಿ ಪಾತ್ರ ಇಂದಿಗೆ ಕೂಡ ಪ್ರಸ್ತುತವಾಗಿದೆ. ಪದ್ಮಾವತಿ ಕೂಡ ನನ್ನ ರೀತಿಯಲ್ಲಿಯೇ ಧೈರ್ಯ, ಬುದ್ದಿವಂತ ಮತ್ತು ಶಕ್ತಿಯುತ ಮಹಿಳೆ. ತೆರೆಯ ಮೇಲೆ ಅಭಿನಯಿಸುವಾಗ ನನ್ನನ್ನು ಕೂಡ ಸ್ವಲ್ಪ ಮಟ್ಟಿಗೆ ಕಂಡುಕೊಂಡೆ ಎನ್ನುತ್ತಾರೆ ದೀಪಿಕಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com