ಬಾಲಿವುಡ್ ನಟಿ ಸನ್ನಿ ಲಿಯೋನ್-ಡೇನಿಯಲ್ ವೆಬರ್ ದಂಪತಿ ಅಪ್ಪನ ದಿನಾಚರಣೆ ಹಿನ್ನೆಲೆ ಯಲ್ಲಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ತನ್ನ ಕುಟುಂಬದ ಖಾಸಗಿ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.
ದಂಪತಿ ದತ್ತುಪುತ್ರಿ ನಿಶಾ ಜತೆಗೆ ಅರೆನಗ್ನವಾಗಿರುವ ಫೋಟೋವನ್ನು ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಡೇನಿಯಲ್ ವೆಬರ್ ಹಂಚಿಕೊಂಡಿದ್ದರು. ಇದನ್ನು ಇಟ್ಟುಕೊಂಡು ಟ್ವೀಟರಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಪತಿ ಡೇನಿಯಲ್ ವೆಬರ್ ಜತೆ ಸನ್ನಿ ಲಿಯೋನ್ ತನ್ನ ದತ್ತು ಪುತ್ರಿ ಜತೆಗೆ ಅರೆನಗ್ನವಾಗಿ ಕಾಣಿಸಿಕೊಂಡಿರುವ ಫೋಟೋ ಹಲವರ ಕೆಂಗಣ್ಣಿಗೆ ಕಾರಣವಾಗಿದೆ. ನೇಟಿಜನ್ಸ್ ಸನ್ನಿ ದಂಪತಿಗಳನ್ನು ಟ್ರೋಲ್ ಮೂಲಕ ಅಟ್ಯಾಕ್ ಮಾಡಿದ್ದಾರೆ.
ಕೆಲವು ನೇಟಿಜನ್ಸ್ “Once a porn star, always a porn star”, ಮಗುವಿನ ಜತೆಗೆ ಏನಿದು ಅಸಭ್ಯವಾಗಿ, ಡರ್ಟಿ ಫ್ಯಾಮಿಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ದತ್ತು ಪುತ್ರಿ ನಿಶಾ ಮುಂದೆ ಏನೇ ಆಗಲಿ, ಅವಳ ಬದುಕನ್ನು ರೂಪಿಸಲು ಸನ್ನಿ ಪೋಷಕ ಪಾತ್ರ ಪೋಷಿಸುತ್ತಿದ್ದಾರೆ. ಪೋರ್ನ್ ಸಿನಿಮಾ ಮಾಡಿ, ಆದರೆ ಮಕ್ಕಳನ್ನು ದೂರವಿಡಿ ಎಂಬ ಕಾಮೆಂಟ್ಗಳು ಹರಿದುಬರುತ್ತಿವೆ.