ನವದೆಹಲಿ: ಬಾಲಿವುಡ್ ನಟ ನರೇಂದ್ರ ಝಾ (55) ನಿಧನರಾಗಿದ್ದಾರೆ. ಝಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ
ಬಿಹಾರದ ಮಧುಬನಿಯಲ್ಲಿ ಸೆಪ್ಟಂಬರ್ 2, 1962ರಂದು ಜನಿಸಿದ್ದ ಝಾ ಬಾಲಿವುಡ್ ಚಿತ್ರಗಳಲ್ಲಿ, ಕಿರುತೆರೆ ಕಾರ್ಯಕ್ರಮಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದಿದ್ದರು.
ಹೃತಿಕ್ ರೋಷನ್ ಅವರ ’ಕಾಬಿಲ್’, ಶಾರುಖ್ ಖಾನ್ ಅವರ ”ರಯೀಸ್’., ಶಾಹಿದ್ ಕಪೂರ್ ಅವರ 'ಹೈದರ್' ಚಿತ್ರಗಳಲ್ಲಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದರು.
It’s really shocking to hear about the sad demise of our friend #NarendraJha who was a brillinat actor & a great human being. Will miss U. #RIP. pic.twitter.com/vbpMzCRweP
"ನನ್ನ ಸ್ನೇಹಿತ ನರೇಂದ್ರ ಝಾ ಅವರ ಮರಣದ ವಾರ್ತೆ ಹೇಳಲು ವಿಷಾದಿಸುತ್ತೇನೆ. ಅವರ ಅಕಾಲಿಕ ಮರಣ ನನಗೆ ಅಚ್ಚರಿ ತಂದಿದೆ. ಅವರೊಬ್ಬ ಬ್ರಿಲಿಯಂಟ್ ನಟ, ಮಹಾನ್ ವ್ಯಕ್ತಿಯಾಗಿದ್ದರು" ಝಾ ಮರಣದ ಸಂಬಂಧ ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.