ಸೂಕ್ಷ್ಮ ಮನಸ್ಸಿನವರು ಬಾಲಿವುಡ್ ಗೆ ಬರಬಾರದು: ಸೊಹ ಆಲಿ ಖಾನ್

ತುಂಬ ಸೂಕ್ಷ್ಮವಾಗಿರುವ ವ್ಯಕ್ತಿಗಳು ಬಾಲಿವುಡ್ ಚಿತ್ರೋದ್ಯಮಕ್ಕೆ ಬರಬಾರದು ಎಂದು ನಟಿ ಸೋಹ ...
ಸೊಹ ಆಲಿ ಖಾನ್
ಸೊಹ ಆಲಿ ಖಾನ್
Updated on

ಮುಂಬೈ: ತುಂಬ ಸೂಕ್ಷ್ಮವಾಗಿರುವ ವ್ಯಕ್ತಿಗಳು ಬಾಲಿವುಡ್ ಚಿತ್ರೋದ್ಯಮಕ್ಕೆ ಬರಬಾರದು ಎಂದು ನಟಿ ಸೋಹ ಆಲಿಖಾನ್ ಹೇಳಿದ್ದಾರೆ.

ಮೊನ್ನೆ ಶುಕ್ರವಾರ ಮಿಸ್ ಫೆಸಿನಾ 2018ರ ಅಂತಿಮ ಸುತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವ ರೂಪದರ್ಶಿಗಳಿಗೆ ತಮ್ಮ ಕಿವಿ ಮಾತೇನು ಎಂದು ಕೇಳಿದಾಗ ನಾನು ಮಾಡೆಲಿಂಗ್ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ಆದರೆ ನಟನೆ ಬಗ್ಗೆ ಹೇಳಬಲ್ಲೆ. ತುಂಬಾ ಸೂಕ್ಷ್ಮ ಭಾವನಜೀವಿಗಳು ಈ ಸಿನಿಮಾ ಉದ್ಯಮಕ್ಕೆ ಬರದಿರುವುದೇ ಒಳಿತು ಎಂದರು.

ಇಲ್ಲಿ ನಿಮ್ಮ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರಬಹುದು, ಆದರೆ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು, ದಪ್ಪ ಚರ್ಮದವರಾಗಿರಬೇಕು. ನಿಮ್ಮ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ     ಪ್ರತಿಯೊಬ್ಬರೂ ಒಂದು ಅಭಿಪ್ರಾಯ ತಳೆದಿರುತ್ತಾರೆ. ಅವುಗಳನ್ನು ಓದಿದಾಗ ನೀವು ಸೂಕ್ಷ್ಮ ಮನಸ್ಸಿನವರಾಗಿದ್ದರೆ ನಿಮಗೆ ಬೇಸರವಾಗಬಹುದು ಎಂದರು.
ಇಂದಿನ ಯುವ ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದು ನನಗೆ ಖುಷಿಯನ್ನುಂಟುಮಾಡುತ್ತದೆ. ಯುವ ಪ್ರತಿಭಾನ್ವಿತರಿಗೆ ಸೌಂದರ್ಯ ಸ್ಪರ್ಧೆಯೆಂಬುದು ಒಂದು ಉತ್ತಮ ವೇದಿಕೆ. ರೂಪದರ್ಶಿಗಳಿಗೂ ಸಹ ಆರಂಭದಲ್ಲಿ ಇದು ಅತ್ಯುತ್ತಮ ವೇದಿಕೆ, ನಟಿಯರು ವೃತ್ತಿಯ ಆರಂಭದಲ್ಲಿ ಇದರ ಭಾಗವಾಗಿರುತ್ತಾರೆ ಎಂದರು.

ಸೊಹಾ ಆಲಿಖಾನ್ ತಮ್ಮ ಪತಿ ಕುನಲ್ ಕೆಮ್ಮು ಜೊತೆ ರಾಮ್ ಜೇಠ್ಮಲಾನಿ ಅವರ  ಜೀವನ ಚರಿತ್ರೆ ಕುರಿತು ಸಿನಿಮಾ ತಯಾರಿಸುತ್ತಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಸಾಹೇಬ್, ಬಿವಿ ಔರ್ ಗ್ಯಾಂಗ್ ಸ್ಟರ್ 3 ಚಿತ್ರಗಳಲ್ಲಿ ನಟಿಸಲಿದ್ದಾರೆ. ಈ ಚಿತ್ರ ಮುಂದಿನ ಜುಲೈಯಲ್ಲಿ ಬಿಡುಗಡೆಯಾಗಲಿದೆ.

ಈ ನಡುವೆ ಅವರು ಪೆರಿಲ್ಸ್ ಆಫ್ ಬಿಯಿಂಗ್ ಮಾಡರೇಟ್ಲಿ ಫೇಮಸ್ ಎಂಬ ಪುಸ್ತಕ ಕೂಡ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com