ಗೆಳೆಯ ಅಂಗಾದ್ ಬೇಡಿಯನ್ನು ವಿವಾಹವಾದ ನಟಿ ನೇಹಾ ಧುಪಿಯಾ

ಬಾಲಿವುಡ್ ನಲ್ಲಿ ಕೂಡ ಇದೀಗ ತಾರೆಯರ ವಿವಾಹ ಕಾರ್ಯಕ್ರಮ ಜೋರಾಗಿಯೇ ಸಾಗುತ್ತಿದೆ....
ನೇಹಾ ಧುಪಿಯಾ ಮತ್ತು ಅಂಗಾದ್ ಬೇಡಿ
ನೇಹಾ ಧುಪಿಯಾ ಮತ್ತು ಅಂಗಾದ್ ಬೇಡಿ

ಬಾಲಿವುಡ್ ನಲ್ಲಿ ಕೂಡ ಇದೀಗ ತಾರೆಯರ ವಿವಾಹ ಕಾರ್ಯಕ್ರಮ ಜೋರಾಗಿಯೇ ಸಾಗುತ್ತಿದೆ. ನಿನ್ನೆಯಷ್ಟೆ ಸೋನಂ ಕಪೂರ್ ಅವರ ಅದ್ದೂರಿ ವಿವಾಹ ಮುಗಿದ ನಂತರ ಇದೀಗ ಮತ್ತೊಬ್ಬ ನಟಿಯ ಶಾದಿ ಸದ್ದಿಲ್ಲದೆ ಮುಗಿದಿದೆ.

ನಟಿ ನೇಹಾ ದೂಪಿಯಾ ತನ್ನ ಗೆಳೆಯ ಅಂಗಾದ್ ಬೇಡಿಯನ್ನು ವಿವಾಹವಾಗಿದ್ದು ಬಿಳಿ ಮತ್ತು ಗುಲಾಬಿ ಬಣ್ಣದ ಧಿರಿಸಿನಲ್ಲಿ ಜೋಡಿ ಸೊಗಸಾಗಿ ಕಾಣುತ್ತಿದ್ದಾರೆ.

ನೇಹಾ ಮತ್ತು ಅಂಗಾದ್ ಇಬ್ಬರೂ ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ವಿವಾಹ ದೆಹಲಿಯ ಗುರುದ್ವಾರದಲ್ಲಿ ನಡೆದಿದೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿರುವ ಪಿಂಕ್ ನಟಿ ನೇಹಾ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ನೇಹಾಳ ತಂದೆ ಕಮಾಂಡರ್ ಪ್ರದೀಪ್ ಸಿಂಗ್ ಧುಪಿಯಾ ಭಾರತೀಯ ಸೇನೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಂಗಾದ್ ಬೇಡಿಯ ತಂದೆ ಬಿಶಾನ್ ಸಿಂಗ್ ಬೇಡಿ ಅತ್ಯುತ್ತಮ ಎಡಗೈ ಸ್ಪಿನ್ನರ್ ಆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com