ರೊಹಿಂಗ್ಯಾ ವಲಸಿಗರು ಇನ್ನೂ ಹೋರಾಟದ ಜೀವನ ನಡೆಸುತ್ತಿದ್ದಾರೆ: ಪ್ರಿಯಾಂಕಾ ಚೋಪ್ರಾ

ಜಾಗತಿಕ ಸಮುದಾಯವನ್ನು ತಮ್ಮ ನೆರವಿಗೆ ಬರುವಂತೆ ಒತ್ತಾಯಿಸಲು ಸಂಘರ್ಷದ ವಲಯದಲ್ಲಿ ...
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ

ಢಾಕಾ: ಜಾಗತಿಕ ಸಮುದಾಯವನ್ನು ತಮ್ಮ ನೆರವಿಗೆ ಬರುವಂತೆ ಒತ್ತಾಯಿಸಲು ಸಂಘರ್ಷದ ವಲಯದಲ್ಲಿ ಶಾಂತತೆಯನ್ನು ತರಬೇಕು ಎಂದು ಯುನಿಸೆಫ್ ಗುಡ್ ವಿಲ್ ರಾಯಭಾರಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

ರೊಹಿಂಗ್ಯಾ ವಲಸಿಗರನ್ನು ಭೇಟಿ ಮಾಡಿ ಬಂದಿರುವ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಲ್ಲಿನ ಫೋಟೋ, ವಿಡಿಯೊಗಳನ್ನು ಹಾಕಿಕೊಂಡಿದ್ದಾರೆ.

ರೊಹಿಂಗ್ಯಾದ ಜಮ್ಟೊಲಿ ಮಹಿಳಾ ಸ್ನೇಹಿ ಶಿಬಿರದತ್ತ ನಡೆದುಕೊಂಡು ಹೋಗುತ್ತಿರುವಾಗ ಅಲ್ಲಿನ ಕೆಲವು ಶಾಂತ ವಾತಾವರಣವು ನನ್ನನ್ನು ಒಂದು ಕ್ಷಣ ನಿಲ್ಲುವಂತೆ ಮಾಡಿತು. ಈ ಶಿಬಿರಗಳು ಜನದಟ್ಟಣೆಯಿಂದ ಅಸಂಖ್ಯ ಜನರಿಂದ ಕೂಡಿದ್ದರೂ ಸಹ ಬಿದಿರಿನ ಗೋಡೆಯ ಕಡ್ಡಿಗಳಿಂದ ನಿರ್ಮಿಸಿದ ಮೇಲ್ಛಾವಣಿಯ ಸಣ್ಣ ಗುಡಿಸಲುಗಳಲ್ಲಿ ವಾಸಿಸುತ್ತಿರುವುದು ನಿಜಕ್ಕೂ ಆಶ್ಚರ್ಯ ತರುತ್ತದೆ ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.

ಇಲ್ಲಿ ವಾಸುಸುತ್ತಿರುವ ಹೆಣ್ಣು ಮಕ್ಕಳು ಇದನ್ನು ತಮ್ಮ ಶಾಂತಮನೆ ಎಂದು ಕರೆಯುತ್ತಾರೆ. ಈ ನಿರಾಶ್ರಿತ ತಾಣಕ್ಕೆ ಹೆಣ್ಣು ಮಕ್ಕಳು ಬಂದು ಸಮಾಲೋಚನೆ ಪಡೆದುಕೊಳ್ಳುತ್ತಾರೆ, ಸ್ವಚ್ಛತೆ ಬಗ್ಗೆ ಕಲಿಯುತ್ತಾರೆ, ಸ್ನೇಹಿತರೊಂದಿಗೆ ಮಾತನಾಡುತ್ತಾ ಸಂಗೀತ, ಕಲೆಯನ್ನು ಕೂಡ ಕಲಿಯುತ್ತಾರೆ ಎಂದು ನಿರಾಶ್ರಿತ ತಾಣದಲ್ಲಿ ಚಹಾ ಸೇವಿಸುತ್ತಾ ಇರುವ ಫೋಟೋಗಳನ್ನು ಹಾಕಿಕೊಂಡಿದ್ದಾರೆ.

ಇಲ್ಲಿ ಸುಮಾರು 50 ಮಹಿಳಾ ಪರ ಜಾಗಗಳಿದ್ದು ದಿನಗೂಲಿಯಾಗಿ 50ರಿಂದ 70 ರೊಹಿಂಗ್ಯಾ ಮಹಿಳೆಯರಿಗೆ ಆಶ್ರಯ ನೀಡುತ್ತಿದೆ. ರೊಹಿಂಗ್ಯಾ ವಲಸಿಗರು ಇನ್ನೂ ಹೋರಾಟದ ಜೀವನ ನಡೆಸುತ್ತಿದ್ದು ಜನರು ಯುನಿಸೆಫ್ ಮೂಲಕ ರೊಹಿಂಗ್ಯಾ ಜನರಿಗೆ ಧನಸಹಾಯ ಮಾಡುವಂತೆ ಪ್ರಿಯಾಂಕಾ ಚೋಪ್ರಾ ಒತ್ತಾಯಿಸಿದ್ದಾರೆ,

ಈ ನಡುವೆ ಪ್ರಿಯಾಂಕಾ ಚೋಪ್ರಾ ರೊಹಿಂಗ್ಯಾ ವಲಸಿಗರನ್ನು ಭೇಟಿ ಮಾಡಿರುವುದಕ್ಕೆ ಹಲವರು ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com