ನವದೆಹಲಿ: ವಿವಿಧ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರುಪಾಯಿ ವಂಚಿಸಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಜೀವನ ಆಧಾರಿತ ಚಿತ್ರ ಬಿಡುಗಡೆ ಸಿದ್ಧವಾಗಿದ್ದು, ಬಾಲಿವುಡ್ ನಟ ಗೋವಿಂದ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
'ನಾನು ವಿಜಯ್ ಮಲ್ಯ ಅವರ ಜೀವನ ಆಧಾರಿತ ಚಿತ್ರ ಮಾಡುತ್ತಿದ್ದು, ಈ ಚಿತ್ರದಲ್ಲಿ ಗೋವಿಂದ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಸಂಪೂರ್ಣ ಮನೋರಂಜನಾ ಚಿತ್ರ' ಎಂದು ಸೆನ್ಸಾರ್ ಮಂಡಳಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅವರು ಹೇಳಿದ್ದಾರೆ.
ಮದ್ಯದ ದೊರೆ ಚಿತ್ರಕ್ಕೆ 'ರಂಗೀಲಾ ರಾಜ' ಎಂದು ಹೆಸರಿಟ್ಟಿರುವುದಾಗಿ ನಿಹಲಾನಿ ಅವರು ಎಎನ್ಐಗೆ ತಿಳಿಸಿದ್ದಾರೆ. ಅಲ್ಲದೆ ಚಿತ್ರದ ಒಂದು ಹಾಡಿನ ಚಿತ್ರೀಕರಣವೂ ಮುಗಿದಿದೆ ಎಂದು ಹೇಳಿದ್ದಾರೆ.
ಗೋವಿಂದ್ ಅವರು 35 ವರ್ಷಗಳ ನಂತರ ನಿಹಲಾನಿ ನಿರ್ದೇಶನದ ರಂಗೀಲಾ ರಾಜ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರ ಆಗಸ್ಟ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.