ಜಾಹ್ನವಿ ಕಪೂರ್-ಅರ್ಜುನ್ ಕಪೂರ್
ಬಾಲಿವುಡ್
ಸೋದರಿ ಎದುರೆ ಸೆಕ್ಸ್ ಲೈಫ್ ಬಗ್ಗೆ ರಿವೀಲ್ ಮಾಡಿದ ಅರ್ಜುನ್ ಕಪೂರ್, ದಂಗಾದ ಜಾಹ್ನವಿ ಕಪೂರ್?
ಬಾಲಿವುಡ್ ನಟ ಅರ್ಜುನ್ ಕಪೂರ್ ಸಹೋದರಿ ಜಾಹ್ನವಿ ಕಪೂರ್ ಪಕ್ಕ ಕುಳಿತು ಸೆಕ್ಸ್ ಜೀವನದ ಕುರಿತು ಮಾತನಾಡಿದ್ದು ಅಣ್ಣ ಮಾತುಗಳನ್ನು ಕೇಳಿ ಜಾಹ್ನವಿ ದಂಗಾಗಿದ್ದಾರಾ...
ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ ಸಹೋದರಿ ಜಾಹ್ನವಿ ಕಪೂರ್ ಪಕ್ಕ ಕುಳಿತು ಸೆಕ್ಸ್ ಜೀವನದ ಕುರಿತು ಮಾತನಾಡಿದ್ದು ಅಣ್ಣ ಮಾತುಗಳನ್ನು ಕೇಳಿ ಜಾಹ್ನವಿ ದಂಗಾಗಿದ್ದಾರೆ.
ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿಥ್ ಕರಣ್ ಕಾರ್ಯಕ್ರಮಕ್ಕೆ ಈ ಬಾರಿ ಅರ್ಜುನ್ ಕಪೂರ್ ಮತ್ತು ಜಾಹ್ನವಿ ಕಪೂರ್ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಅರ್ಜುನ್ ಕಪೂರ್ ತಮ್ಮ ಸೆಕ್ಸ್ ಲೈಫ್ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಭಾನುವಾರ ಪ್ರಸಾರವಾಗುವ ಸಂಚಿಕೆಯ ಪ್ರೊಮೋವನ್ನು ವಾಹಿನಿ ಬಿಡುಗಡೆ ಮಾಡಿದ್ದು ಇದರಲ್ಲಿ ಅರ್ಜುನ್ ಕೆಲ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಇನ್ನು ಪ್ರೋಮೋದಲ್ಲಿ ಕರಣ್ ಖಾಸಗಿ ಪ್ರಶ್ನೆಗಳನ್ನು ಕೇಳಲು ಆರಂಭಿಸಿದಾಗ ಅರ್ಜುನ್ ನನ್ನ ಪಕ್ಕವೇ ಸೋದರಿ ಕುಳಿತಿದ್ದಾಳೆ. ಅವಳ ಮುಂದೆ ಖಾಸಗಿ ಅನುಭವ ಹೇಗೆ ಹಂಚಿಕೊಳ್ಳಬೇಕು ಎಂದು ಮುಜುಗರಕ್ಕೆ ಒಳಗಾಗಿರುವುದನ್ನು ಕಾಣಬಹುದು.
ಇನ್ನು ಅರ್ಜುನ್ ತನಗಿಂತ 14 ವರ್ಷಕ್ಕೆ ದೊಡ್ಡವರಾಗಿರುವ ಒಂದು ಮಗುವಿನ ತಾಯಿ ಮಲೈಕಾ ಅರೋರಾ ಜತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಮುಂದಿನ ವರ್ಷ ಈ ಜೋಡಿ ಮದುವೆಯಾಗಲಿದ್ದಾರೆ ಎಂದ ಸುದ್ದಿ ಹರಿದಾಡುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ