2010ರಲ್ಲಿ ರಾಜ್‌ಪಾಲ್ ಯಾದವ್ ಮೊಟ್ಟ ಮೊದಲ ಸಲ ನಟಿಸಿ, ನಿರ್ದೇಶಿಸಿದ ಆಟ ಪಾಟ ಲಪಾಟ ಚಿತ್ರಕ್ಕಾಗಿ ದೆಹಲಿ ಮೂಲದ ಮರುಳಿ ಪ್ರಾಜೆಕ್ಟ್ ಕಂಪೆನಿ ಮಾಲೀಕ ಎಮ್ ಜಿ ಅಗರ್ವಾಲ್ ಬಳಿ 5 ಕೋಟಿ ರುಪಾಯಿ ಸಾಲ ಪಡೆದಿದ್ದರು. ಈ ಮೊತ್ತಕ್ಕೆ ಬಡ್ಡಿ ಸೇರಿ 2011 ಡಿಸೆಂಬರ್ 3ರ ಸಮಯಕ್ಕೆ ಮತ್ತೆ ವಾಪಸ್ ಮಾಡುತ್ತೇನೆ ಎಂದು ಮಾತುಕೊಟ್ಟಿದ್ದರು. ಆದರೆ ರಾಜ್‌ಪಾಲ್ ಯಾದವ್ ಮಾತು ತಪ್ಪಿದ್ದರು.