
ಮುಂಬೈ: ನಾನಾ ಪಟೇಕರ್ ವಿರುದ್ಧ ತನುಶ್ರೀ ದತ್ ಅವರ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಅಪ್ರಸ್ತುತ ಎಂದು ಸಿನಿಮಾ ಮತ್ತು ಟಿವಿ ಕಲಾವಿದರ ಸಂಘ ಹೇಳಿದ್ದು, ನಾನಾ ಪಟೇಕರ್ ಅವರಿಗೆ ಬೆಂಬಲ ಸೂಚಿಸಿದೆ.
2008ರಲ್ಲಿ ಹಾರ್ನ್ ಓಕೆ ಪ್ಲೀಸಸ್ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಾನಾ ಪಟೇಕರ್ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತನುಶ್ರೀ ದತ್ ಆರೋಪಿಸಿದ್ದರು. ಈ ಸಂಬಂಧ ದಶಕದ ಹಿಂದೆಯೇ ಸಿನಿಮಾ ಮತ್ತು ಟಿವಿ ಕಲಾವಿದರ ಸಂಘದಲ್ಲಿ ದೂರು ದಾಖಲಿಸಿದ್ದಾಗಿ ಹೇಳಿಕೆ ನೀಡಿದ್ದರು.
ಈ ಸಂಬಂಧ ಪ್ರತಿಕ್ರಿಯಿಸಿರುವ ಕಲಾವಿದರ ಸಂಘ, 2008ರಲ್ಲಿಯೇ ದೂರು ದಾಖಲಾಗಿದ್ದರೆ ಕಲಾವಿದರು ಹಾಗೂ ನಿರ್ಮಾಪಕರ ಸಮಿತಿ ಸಮಸ್ಯೆ ಪರಿಹರಿಸಬಹುದಿತ್ತು. ಆದರೆ. 2008 ರ ಪ್ರಕರಣ ಈಗ ಅಪ್ರಸ್ತುತ ಎಂದು ಕಲಾವಿದರ ಸಂಘ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಅಪರಾಧವಾಗಿದ್ದು, ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎಂದಿರುವ ಕಲಾವಿದರ ಸಂಘ ಮೂರು ವರ್ಷಕ್ಕಿಂತ ಮೇಲ್ಪಟ್ಟ ಪ್ರಕರಣದ ವಿಚಾರಣೆ ನಡೆಸಲು ತಮ್ಮಗೆ ಅಧಿಕಾರವಿಲ್ಲ ಎಂದು ಹೇಳಿದೆ.
ಆದಾಗ್ಯೂ, ತನುಶ್ರೀ ದತ್ ಅವರ ಹೇಳಿಕೆ ಬಗ್ಗೆ ತ್ವರಿತವಾಗಿ ವಿಚಾರಣೆ ನಡೆಸಿ ನ್ಯಾಯ ಒದಗಸಿಬಹುದು . ಇಂತಹ ಪ್ರಕರಣಗಳು ಕಂಡುಬಂದರೆ ಕೂಡಲೇ ಗಮನಕ್ಕೆ ತರುವಂತೆ ಸದಸ್ಯರಿಗೆ ಸೂಚನೆ ನೀಡಲಾಗಿದೆ.ಉತ್ತಮ ಕೆಲಸದ ಪರಿಸ್ಥಿತಿ ವಾತಾವರಣ ನಿಟ್ಟಿನಲ್ಲಿ ಬದ್ಧವಾಗಿದ್ದು, ಅಂತಹವರಿಗೆ ನೈತಿಕ ಹಾಗೂ ಕಾನೂನಾತ್ಮಕ ಆತ್ಮಸ್ಥೈರ್ಯ ಮೂಡಿಸುವುದಾಗಿ ಕಲಾವಿದರ ಸಂಘ ಹೇಳಿದೆ
Advertisement