ಐಶ್ವರ್ಯ ರೈ
ಬಾಲಿವುಡ್
ವೈರಲ್ ಆಗುತ್ತಿರುವ #MeToo ಅಭಿಯಾನ; ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಹೇಳಿದ್ದೇನು?
ಲೈಂಗಿಕ ಕಿರುಕುಳ ಆರೋಪಗಳ ಕುರಿತಂತೆ ತಮ್ಮ ಅಳಲನ್ನು ತೊಡಿಕೊಳ್ಳಲು #MeToo ಅಭಿಯಾನ ದೊಡ್ಡ ವೇದಿಕೆಯಾಗಿದ್ದು ವೈರಲ್ ಆಗುತ್ತಿರುವ ಈ ಅಭಿಯಾನದ...
ಮುಂಬೈ: ಲೈಂಗಿಕ ಕಿರುಕುಳ ಆರೋಪಗಳ ಕುರಿತಂತೆ ತಮ್ಮ ಅಳಲನ್ನು ತೊಡಿಕೊಳ್ಳಲು #MeToo ಅಭಿಯಾನ ದೊಡ್ಡ ವೇದಿಕೆಯಾಗಿದ್ದು ವೈರಲ್ ಆಗುತ್ತಿರುವ ಈ ಅಭಿಯಾನದ ಕುರಿತು ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
#MeToo ಅಭಿಯಾನದ ಮೂಲಕ ಲೈಂಗಿಕ ಕಿರುಕುಳದ ಅನುಭವಗಳನ್ನು ಹಂಚಿಕೊಳ್ಳುತ್ತಿರುವ ಮಹಿಳೆಯರಿಗೆ ಹೆಚ್ಚಿನ ಬೆಂಬಲ ಮತ್ತು ಶಕ್ತಿಯನ್ನು ನೀಡಬೇಕು ಎಂದು ಐಶ್ವರ್ಯ ರೈ ಬಚ್ಚನ್ ಹೇಳಿದ್ದಾರೆ.
ಬಾಲಿವುಡ್ ನಟ ತನುಶ್ರೀ ದತ್ತಾ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ದೇಶದಲ್ಲಿ #MeToo ಚಳುವಳಿ ದೇಶದಲ್ಲಿ ವೇಗ ಪಡೆದಿದೆ. ಅಲೋಕ್ ನಾಥ್, ರಜತ್ ಕಪೂರ್, ವಿಕಾಸ್ ಬಹ್ಲ್ ಮನರಂಜನೆ ಕ್ಷೇತ್ರ, ಪತ್ರಿಕೋಧ್ಯಮ ಹಾಗೂ ಇನ್ನಿತ್ತರ ಉದ್ಯಮಗಳು ಸೇರಿದಂತೆ ಹಲವು ಮಂದಿ ಮಹಿಳೆಯರು ತಮ್ಮ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಧೈರ್ಯವಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಐಶ್ವರ್ಯ ರೈ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ