#MeToo ಎಫೆಕ್ಟ್: ಕಬೀರ್ ಖಾನ್ '83' ಚಿತ್ರದಿಂದ ವಿಕಾಸ್ ಬಹ್ಲ್ ಹೊರಕ್ಕೆ!

ಫಾಂಟಮ್‌ ಕಂಪನಿ ಮಾಜಿ ಸಿಬ್ಬಂದಿಯೊಬ್ಬರು ನಿರ್ದೇಶಕ ವಿಕಾಸ್ ಬಹ್ಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು ಇದರಿಂದಾಗಿ ಅವರು ಬಾಲಿವುಡ್ ನ ಖ್ಯಾತ...
ಕಂಗನಾ ರಣಾವತ್-ವಿಕಾಸ್ ಬಹ್ಲ್
ಕಂಗನಾ ರಣಾವತ್-ವಿಕಾಸ್ ಬಹ್ಲ್
ಮುಂಬೈ: ಫಾಂಟಮ್‌ ಕಂಪನಿ ಮಾಜಿ ಸಿಬ್ಬಂದಿಯೊಬ್ಬರು ನಿರ್ದೇಶಕ ವಿಕಾಸ್ ಬಹ್ಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು ಇದರಿಂದಾಗಿ ಅವರು ಬಾಲಿವುಡ್ ನ ಖ್ಯಾತ ನಿರ್ದೇಶಕ ಕಬೀರ್ ಖಾನ್ ರ 83 ಚಿತ್ರದಿಂದ ಕೈ ಬಿಡಲಾಗಿದೆ.
ಕ್ರಿಕೆಟ್ ಇತಿಹಾಸದಲ್ಲಿ 1983ರ ವಿಶ್ವಕಪ್ ಗೆಲ್ಲುವ ಮೂಲಕ ಭಾರತ ಚೊಚ್ಚಲ ಪದಕಕ್ಕೆ ಮುತ್ತಿಟ್ಟಿತ್ತು. ಇದನ್ನೇ ಕಬೀರ್ ಖಾನ್ ಚಿತ್ರವನ್ನಾಗಿ ಮಾಡುತ್ತಿದ್ದು ಈ ಚಿತ್ರಕ್ಕಾಗಿ ವಿಕಾಸ್ ಬಹ್ಲ್ ಕಬೀರ್ ಖಾನ್ ಅವರಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಬಹ್ಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಬಂದಿದ್ದರಿಂದ ಅವರನ್ನು ಚಿತ್ರದಿಂದ ಕೈಬಿಡಲಾಗಿದೆ ಎಂದು ಕಬೀರ್ ಖಾನ್ ಹೇಳಿದ್ದಾರೆ.
ಈ ಹಿಂದೆ ಫಾಂಟಮ್‌ ಕಂಪನಿ ಮಾಜಿ ಸಿಬ್ಬಂದಿಯೊಬ್ಬರು ಬಹ್ಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು, ಮೀ ಟೂ ಅಭಿಯಾನ ಚುರುಕುಗೊಂಡ ಬಳಿಕ ನಟಿ ಕಂಗನಾ ರಣಾವತ್‌ ಕೂಡ ಅವರ ವಿರುದ್ಧ ಆರೋಪ ಮಾಡಿದ್ದು, ನನ್ನ ಕುತ್ತಿಗೆಯಲ್ಲಿ ಮುಖ ಹುದುಗಿಸಿ, ನನ್ನ ತಲೆಗೂದಲಿನ ವಾಸನೆ ಗ್ರಹಿಸುತ್ತಿದ್ದ ಬಹ್ಲ್, ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ. 
ಬಹ್ಲ್ ಅವರ ಈ ವರ್ತನೆ ನನಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಹೀಗಾಗಿ ಫಾಂಟಮ್‌ ಕಂಪನಿಯ ಮಾಜಿ ಉದ್ಯೋಗಿ ಹೇಳಿದ್ದರಲ್ಲಿ ಸತ್ಯವಿದೆ ಎಂದಿದ್ದಾರೆ. ಸದ್ಯ ವಿಕಾಸ್‌ ಬಹ್ಲ್, ಹೃತಿಕ್‌ ರೋಷನ್‌ ನಟನೆಯ ಸೂಪರ್‌ 30 ಸಿನಿಮಾ ನಿರ್ದೇಶಿಸಿದ್ದು ಜನವರಿಯಲ್ಲಿ ತೆರೆಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com