ಕ್ಯಾಮರಾ ಎದುರು ಬೆತ್ತಲಾಗುವುದು ಒಂದು ಸವಾಲಿನ ಪಾತ್ರವಾಗಿತ್ತು: ಬೆಂಗಳೂರು ಬೆಡಗಿ ಕುಬ್ರಾ ಸೇಠ್

ನಟ ಸೈಫ್ ಅಲಿ ಖಾನ್ ಹಾಗೂ ನವಾಜುದ್ದೀನ್ ಸಿದ್ದೀಕಿ ನಟಿಸುತ್ತಿರುವ ವೆಬ್ ಸಿರೀಸ್ ‘ಸೇಕ್ರೆಡ್ ಗೇಮ್ಸ್’ನಲ್ಲಿ ಅಭಿನಯಿಸಿರುವ ಬೆಂಗಳೂರು ಬೆಡಗಿ ಕುಬ್ರಾ ಸೇಠ್,...
ಕುಬ್ರಾ ಸೇಠ್
ಕುಬ್ರಾ ಸೇಠ್

ಬೆಂಗಳೂರು : ನಟ ಸೈಫ್ ಅಲಿ ಖಾನ್ ಹಾಗೂ ನವಾಜುದ್ದೀನ್ ಸಿದ್ದೀಕಿ ನಟಿಸುತ್ತಿರುವ ವೆಬ್ ಸಿರೀಸ್ ‘ಸೇಕ್ರೆಡ್ ಗೇಮ್ಸ್’ನಲ್ಲಿ  ಅಭಿನಯಿಸಿರುವ ಬೆಂಗಳೂರು ಬೆಡಗಿ ಕುಬ್ರಾ ಸೇಠ್,  ಇದಕ್ಕಿದ್ದಂತೆ  ಹೆಚ್ಚಿನ ಅಭಿಮಾನಿಗಳನ್ನು  ಸಂಪಾದಿಸಿದ್ದು, ಮನೆ ಮಾತಾಗಿದ್ದಾರೆ.

ಸೇಕ್ರೆಡ್ ಗೇಮ್ಸ್ ನಲ್ಲಿ ಕುಬ್ರಾ ಮಂಗಳಮುಖಿ ಕ್ಯಾಬರೆ ಡ್ಯಾನ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕುಕೂ ಪಾತ್ರಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಕುಕೂ ಪಾತ್ರದ ಜನಪ್ರಿಯತೆ , ಅಭಿಮಾನಿಗಳ ಬೆಂಬಲ ಕುರಿತಂತೆ ಆಕೆ ದಿ ನ್ಯೂ ಇಂಡಿಯನ್  ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದಾರೆ.

ಸೇಕ್ರೆಡ್ ಗೇಮ್ಸ್  ನಿಂದ ತಮ್ಮ ಜೀವನ ಬದಲಾಗಿದೆ. ಕುಕೂ ಪಾತ್ರ  ಲೈಂಗಿಕ ಅಲ್ಪಸಂಖ್ಯಾತರ ಧ್ವನಿಯಾಗಿ ರೂಪುಗೊಂಡಿದೆ. ಆ ಸಮುದಾಯದಲ್ಲಿನ ಬಡತನವನ್ನು ಇದು ಪ್ರತಿಬಿಂಬಿಸುತ್ತದೆ.ಅನುರಾಗ್ ಕಶ್ಯಪ್ ಹಾಗ  ನವಾಜ್  ಬುದ್ದಿವಂತರಾಗಿದ್ದು, ಅವರೊಂದಿಗಿನ ಕೆಲಸ ತಮ್ಮಗೆ ಖುಷಿ ನೀಡಿದೆ ಎಂದು ಹೇಳಿದರು.

ಕುಕೂ ಪಾತ್ರವನ್ನು ಪ್ರೇಕ್ಷಕರು ಪ್ರಶಂಸಿದ್ದಾರೆ. ನಿರ್ಮಾಪಕರು  ಈ ಪಾತ್ರಕ್ಕಾಗಿ ಮಂಗಳಮುಖಿಯರು ಸೇರಿದಂತೆ   ನಾಲ್ಕು ತಿಂಗಳ ಕಾಲ ಆಡಿಷನ್ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆದರೆ , ಆ ಪಾತ್ರಕ್ಕೆ ಹೊಂದಿಕೊಳ್ಳುವಂತಹವರು ಯಾರೂ ಸಿಕ್ಕಿರಲಿಲ್ಲ. ಕೊನೆಗೆ ನಾನೂ ಸಿಕ್ಕಿದ್ದು, ಇದು ನನ್ನ ಹಣೆಬರಹ ಎಂದುಕೊಂಡಿದ್ದೇನೆ ಎಂದರು.
                           

                        

 
ಕ್ಯಾಮರಾ ಎದುರು ಬೆತ್ತಲಾಗುವುದು ಒಂದು ಸವಾಲಿನ ಪಾತ್ರವಾಗಿತ್ತು. ಪಾತ್ರಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಾವುದೇ ಆಡಿಷನ್ ನೀಡದೆ ಸಹಿ ಮಾಡಿದ ಮೊದಲ ಚಿತ್ರವಿದು, ನಾನಿನ್ನೂ ಚಿಕ್ಕವಳಾಗಿದ್ದು,  ಇನ್ನೂ ಆಸಕ್ತಿದಾಯಕ ಪಾತ್ರವನ್ನು ವಹಿಸುತ್ತೇನೆ. ನನಗೆ ಯಾವುದೇ  ಸವಾಲುಗಳಿಲ್ಲ. ನನ್ನಿಷ್ಟದಂತೆ ಇರಲು ಇಚ್ಚೆಪಡುತ್ತೇನೆ ಎಂದು ಕುಬ್ರಾ ಸೇಠ್  ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com