ಅಮೀರ್ ಖಾನ್
ಅಮೀರ್ ಖಾನ್

ರಾಜಕೀಯ ಅಂದ್ರೆ ಏನೋ ಹೆದರಿಕೆ, ನಾನು ರಾಜಕೀಯಕ್ಕೆ ಬರುವುದಿಲ್ಲ: ಅಮೀರ್ ಖಾನ್

ಸತ್ಯಮೇವ ಜಯತೇ ಕಾರ್ಯಕ್ರಮದ ಮೂಲಕ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದ ಬಾಲಿವುಡ್ ನಟ ಅಮೀರ್ ಖಾನ್ ರಾಜಕೀಯಕ್ಕೆ ಇಳಿಯುತ್ತಾರೆ ಎಂಬ ಹೇಳಲಾಗುತ್ತಿತ್ತು...
Published on
ನವದೆಹಲಿ: ಸತ್ಯಮೇವ ಜಯತೇ ಕಾರ್ಯಕ್ರಮದ ಮೂಲಕ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದ ಬಾಲಿವುಡ್ ನಟ ಅಮೀರ್ ಖಾನ್ ರಾಜಕೀಯಕ್ಕೆ ಇಳಿಯುತ್ತಾರೆ ಎಂಬ ಹೇಳಲಾಗುತ್ತಿತ್ತು. 
53 ವರ್ಷದ ಅಮೀರ್ ಖಾನ್ ಹೊಸ ಪಕ್ಷ ಕಟ್ಟುವ ಮೂಲಕ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದು ಇದಕ್ಕೆ ಸ್ಪಷ್ಟನೆ ನೀಡಿರುವ ಅಮೀರ್ ಖಾನ್ ನನಗೆ ರಾಜಕೀಯ ಅಂದ್ರೆ ಏನೋ ಹೆದರಿಕೆ, ಹೀಗಾಗಿ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. 
ನಾನು ರಾಜಕಾರಣಿಯಾಗಬೇಕೆಂದು ಬಯಸುವುದಿಲ್ಲ. ಆ ಉದ್ದೇಶವು ನನಗೆ ಇಲ್ಲ. ನಾನು ಸಂವಹನಕಾರನಾಗಿದ್ದೇನೆ. ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ನನಗೆ ರಾಜಕೀಯ ಅಂದ್ರೆನೆ ಹೆದರಿಕೆ ಎಂದು ಹೇಳಿದ್ದಾರೆ. 
ಸಿನಿಮಾ ಮೂಲಕ ಜನರ ಮೇಲೆ ಹೆಚ್ಚು ಪ್ರಭಾವ ಬೀರಬಹುದು ಎಂಬುದು ನನ್ನ ಕಲ್ಪನೆ ಹಾಗೂ ನಂಬಿಕೆ. ನಾನು ಸೃಜನಶೀಲ ವ್ಯಕ್ತಿ, ರಾಜಕೀಯವು ನನ್ನ ವಿಷಯವಲ್ಲ. ನಾನು ಜನರನ್ನು ಮನರಂಜಿಸಲು ಬಯಸುತ್ತೇನೆ. ಒಬ್ಬ ರಾಜಕಾರಣಿಗಿಂತ ಹೆಚ್ಚು ಸೃಜನಶೀಲ ವ್ಯಕ್ತಿಯಾಗಿರಲು ಬಯಸುತ್ತೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com