ಅವಳಿ ಹೆಣ್ಣು ಮಕ್ಕಳಿಗೆ ತಾಯಿಯಾದ ಬಾಲಿವುಡ್ ನಟಿ ಲೀಸಾ ರೈ!

ಮಾಡೆಲ್ ಹಾಗೂ ನಟಿ ಲೀಸಾ ರೈ ತಾಯ್ತನದ ಸಂಭ್ರಮದಲ್ಲಿದ್ದಾರೆ, ಬಾಡಿಗೆ ತಾಯಿಯ ಮೂಲಕ ಅವಳಿ ಹೆಣ್ಣು ಮಕ್ಕಳಿಗೆ ತಾಯಿಯಾಗಿದ್ದಾರೆ....
ಅವಳಿ ಮಕ್ಕಳೊಂದಿಗೆ ಲೀಸಾ ರೈ
ಅವಳಿ ಮಕ್ಕಳೊಂದಿಗೆ ಲೀಸಾ ರೈ
ನವದೆಹಲಿ: ಮಾಡೆಲ್ ಹಾಗೂ ನಟಿ ಲೀಸಾ ರೈ ತಾಯ್ತನದ ಸಂಭ್ರಮದಲ್ಲಿದ್ದಾರೆ, ಬಾಡಿಗೆ ತಾಯಿಯ ಮೂಲಕ ಅವಳಿ ಹೆಣ್ಣು ಮಕ್ಕಳಿಗೆ ತಾಯಿಯಾಗಿದ್ದಾರೆ.
ಬಾಂಬೆ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಲೀಸಾ ರೈ ಈ ವಿಷಯ ಬಹಿರಂಗ ಪಡಿಸಿದ್ದಾರೆ, ಆಟ ಆಡುವುದು, ಸ್ನೇಹಿತರ ಜೊತೆ ಪ್ರಯಾಣ, ಸೆಲ್ಫ್ ಕೇರ್, ಕುಟುಂಬ ಹಾಗೂ ಪತಿ , ನನ್ನ ಜೀವನವೇ ಸಾಹಸದಂತಾಗಿದೆ,  ಸಮಯ ಹೊಂದಾಣಿಕೆ ಮಾಡಿಕೊಂಡು ಎಲ್ಲಾ ಕೆಲಸಗಳನ್ನು ಸರಿದೂಗಿಸಿಕೊಂಡು ಹೋಗಬೇಕು. ಈಗ ನನಗೆ ಹೊಸ ಅನುಭವವಾಗುತ್ತಿದೆ, ನಮ್ಮ ಮಕ್ಕಳನ್ನು ಮುಂಬಯಿನ ಮನೆಗೆ ಕರೆ ತರಲು ನನಗೆ ಇನ್ನೂ ಹೆಚ್ಚಿನ ಸಮಯ ಕಾಯಲು ಸಾಧ್ಯವಿಲ್ಲ ಎಂದು ಲೀಸಾ ರೈ ಹೇಳಿದ್ದಾರೆ.
ನನ್ನ ಜೀವನದಲ್ಲಿ ಹಲವು ಸಂಗತಿಗಳು ಪ್ಲಾನ್ ಇಲ್ಲದೆ ನಡೆದಿವೆ, ನನ್ನ ಸಂಗಾತಿ ಜಾಸೂನ್ ವಿವಾಹವಾದಾಗ ನನಗೆ ಮಕ್ಕಳು ಬೇಕೆಂಬ ಬಯಕೆ ಬಂದಾಗ ಆಶ್ಚರ್ಯವಾಗಿತ್ತು,. ಬಾಡಿಗೆ ತಾಯ್ತನದ ಮೂಲಕ ಜೂನ್  ತಿಂಗಳಲ್ಲಿ ಅವಳಿ ಹೆಣ್ಣು ಮಕ್ಕಳಾಗಿವೆ.
ನನ್ನ ಕ್ಯಾನ್ಸರ್ ಕಾಯಿಲೆ ಜೊತೆ ನಡೆಸಿದ ಹೋರಾಟವನ್ನು ನಾನು ಎಲ್ಲರ ಜೊತೆ ಹಂಚಿಕೊಂಡಾಗ, ನನಗೆ ಅಪಾರ ಬೆಂಬಲ ಸಿಕ್ಕಿತ್ತು, ಈಗ ಈ ಸಂತಸದ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸಿತು ಎದು ಹೇಳಿದ್ದಾರೆ.
ನನ್ನ ಜೀವನದಲ್ಲಿ ಸವಾಲುಗಳು ಹಾಗೂ ಪವಾಡಗಳು ನಡೆದಿವೆ, ನನ್ನ ಪವಾಡದ ಮಕ್ಕಳ ಬಗ್ಗೆ ನನಗೆ ಮಾತನಾಡಲು ಸಾಧ್ಯವಿಲ್ಲ, ಮುಂದಿನ ದಿನಗಳಲ್ಲಿ ನನ್ನ ಮಕ್ಕಳಿಗೆ ಸದೃಢತೆ, ಮುಕ್ತವಾಗಿ ಬದುಕುವುದನ್ನು ಕಲಿಸಿಕೊಡುತ್ತೇನೆ, ಇವೆಲ್ಲವುಗಳನ್ನು ಕಲಿತರೇ ಅವರು ಜೀವನದಲ್ಲಿ ಯಾವುದೇ ರೀತಿಯ ಸಾಧನೆ ಮಾಡಬಹುದು ಎಂದು ಹೇಳಿದ್ದಾರೆ,
2009 ರಲ್ಲಿ ಲೀಸಾ ರೆಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು, 2010 ರಲ್ಲಿ ಆಕೆ ಪೂರ್ಣ ಗುಣಮುಖರಾದರು, ನಂತರ 2012 ರಲ್ಲಿ ತಮ್ಮ ದೀರ್ಘಕಾಲದ ಗೆಳೆಯನ ಜೊತೆ ವಿವಾಹವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com