ತನುಶ್ರೀ ದತ್ತಾ, ನಾನಾ ಪಟೇಕರ್,
ಬಾಲಿವುಡ್
ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳ ಆರೋಪ: ನಾನಾ ಪಾಟೇಕರ್ ಹೇಳಿದ್ದೇನು?
ಬಾಲಿವುಡ್ ನಟ ನಾನಾ ಪಾಟೇಕರ್ 10 ವರ್ಷಗಳ ಹಿಂದೆ ಸಿನಿಮಾ ಶೂಟಿಂಗ್ ವೇಳೆ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ನಟಿ ತನುಶ್ರೀ ದತ್,
ಮುಂಬಯಿ: ಬಾಲಿವುಡ್ ನಟ ನಾನಾ ಪಾಟೇಕರ್10 ವರ್ಷಗಳ ಹಿಂದೆ ಸಿನಿಮಾ ಶೂಟಿಂಗ್ ವೇಳೆ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ನಟಿ ತನುಶ್ರೀ ದತ್, ಆರೋಪಕ್ಕೆ ಹಿರಿಯ ನಟ ಹಾಗೂ ನಿರ್ಮಾಪಕರಾಗಿರುವ ನಾನಾ ಪಾಟೇಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮವೊಂದು ದೂರವಾಣಿ ಮೂಲಕ ಪಾಟೇಕರ್ ಅವರನ್ನು ಸಂಪರ್ಕಿಸಿ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪ್ರಶ್ನಿಸಿದಾಗ ಅದರ ಬಗ್ಗೆ ನಾನೇನು ಮಾಡಬಹುದು? ನೀವೇ ಹೇಳಿ ಎಂದು ವ್ಯಂಗ್ಯವಾಡಿದರು.
ಲೈಂಗಿಕ ಕಿರುಕುಳ ಅಂದರೆ ಅವರು ಏನೆಂದು ಅರ್ಥೈಸಿಕೊಂಡಿದ್ದಾರೆ? ಅಂದು ಚಿತ್ರೀಕರಣ ನಡೆಯುತ್ತಿದ್ದ ವೇಳೆ ಸ್ಥಳದಲ್ಲಿ 50 ರಿಂದ 100 ಮಂದಿ ನನ್ನೊಂದಿಗೆ ಇದ್ದರು ನಾನು ಲೈಂಗಿಕ ಕಿರುಕುಳ ನೀಡಿದ್ದರೇ ಅದು ಅವರ ಗಮನಕ್ಕೆ ಬರುತ್ತಿರಲಿಲ್ಲವೇ ಎಂದು ಹೇಳಿದ್ದಾರೆ,
ಕಾನೂನು ಬದ್ಧವಾಗಿ ಏನು ಮಾಡಬೇಕೋ ಅದನ್ನು ಮಾತ್ರ ನಾನು ನೋಡುತ್ತೇನೆ. ಇದೊಂದು ವ್ಯರ್ಥ ಮಾತುಕತೆಯಾಗಿದೆ ಎಂದು ಹೇಳಿದ್ದಾರೆ.
ಹತ್ತು ವರ್ಷಗಳ ಹಿಂದೆ ಬಾಲಿವುಡ್ನ ‘ಹಾರ್ನ್ ಓಕೆ ಪ್ಲೀಸ್’ ಚಿತ್ರದ ಚಿತ್ರೀಕರಣ ವೇಳೆ ನಾನಾ ಪಾಟೇಕರ್ ನನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ತನುಶ್ರೀ ಆರೋಪಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ