ಅಮಿತ್ ಶಾ-ಮನೋಜ್
ಬಾಲಿವುಡ್
ನರೇಂದ್ರ ಮೋದಿ ಜೀವನಾಧಾರಿತ ಚಿತ್ರದಲ್ಲಿ ಅಮಿತ್ ಶಾ ಪಾತ್ರದಲ್ಲಿ ಮನೋಜ್ ಜೋಶಿ!
ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಪಾತ್ರದಲ್ಲಿ ಮನೋಜ್ ಜೋಶಿ ಅಭಿನಯಿಸುತ್ತಿದ್ದಾರೆ.
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಪಾತ್ರದಲ್ಲಿ ಮನೋಜ್ ಜೋಶಿ ಅಭಿನಯಿಸುತ್ತಿದ್ದಾರೆ.
ಮೋದಿ ಅವರ ಜೀವನಾಧಾರಿತ ಚಿತ್ರದಲ್ಲಿ ನನಗೆ ಅಮಿತ್ ಶಾ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿರುವುದು ಖುಷಿಯ ವಿಚಾರ. ಸಂದೀಪ್ ಸಿಂಗ್ ಅವರು ನನಗೆ ಕರೆ ಮಾಡಿ ಈ ಪಾತ್ರ ಮಾಡಬೇಕು ಎಂದು ಕೇಳಿದ ತಕ್ಷಣ ನಾನು ಓಕೆ ಅಂದೆ. ಚಿತ್ರದಲ್ಲಿ ಇದು ಪ್ರಮುಖ ಪಾತ್ರವಾಗಿದೆ ಎಂದರು.
ಚಿತ್ರದಲ್ಲಿ ದೊಡ್ಡ ತಾರಾಗಣವಿದ್ದು ಜರೀನಾ ವಹಾಬ್, ಪ್ರಶಾಂತ್ ನಾರಾಯಣ್, ಬೋಮನ್ ಇರಾನಿ, ಬರ್ಕಾ ಬಿಸ್ತಾ ಸೇನ್ ಗುಪ್ತ, ದರ್ಶನ್ ಕುಮಾರ್ ಅಭಿನಯಿಸುತ್ತಿದ್ದು ಮೋದಿ ಪಾತ್ರದಲ್ಲಿ ವಿವೇಕ್ ಆನಂದ್ ಒಬೇರಾಯ್ ನಟಿಸುತ್ತಿದ್ದಾರೆ.
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದು ಬಳಿಕ 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹಮತ ಸಾಧಿಸಿ ಪ್ರಧಾನಿ ದೇಶದ 14ನೇ ಪ್ರಧಾನಿಯಾದ ಕುರಿತಂತೆ ಚಿತ್ರಕಥೆ ಇರಲಿದೆ.
ಈ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಒಮುಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ