ಮುಂಬೈ:ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ರೋಹಿತ್ ಶೊಟ್ಟಿ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೂರ್ಯ ವಂಶಿ ಚಿತ್ರದ ಸೆಟ್ ನಲ್ಲಿ ಅಕ್ಷಯ್ ಕುಮಾರ್ ಹಾಗೂ ರೋಹಿತ್ ಶೆಟ್ಟಿ ಹೊಡೆದಾಡಿಕೊಂಡಿದ್ದು, ಕರಣ್ ಜೋಹರ್ ಜಗಳನ್ನು ಬಿಡಿಸಿದ್ದಾರೆ. 30 ಸೆಕೆಂಡ್ ಗಳ ಈ ವಿಡಿಯೋವನ್ನು ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕತ್ರಿನಾ ಕೈಫ್ ಕ್ಯಾಮರಾಕ್ಕೆ ಚಾಲನೆ ನೀಡುವ ಮೂಲಕ ರೋಹಿತ್ ಹಾಗೂ ಅಕ್ಷಯ್ ಅವರು ಜಗಳವಾಡುತ್ತಿರುವ ವಿಡಿಯೋವನ್ನು ತೋರಿಸಿದ್ದರು. ಅಕ್ಷಯ್ ಕುಮಾರ್ ಈ ವಿಡಿಯೋವನ್ನು ಹಂಚಿಕೊಂಡು ಅದಕ್ಕೆ ಬ್ರೇಕಿಂಗ್ ನ್ಯೂಸ್ ಎಂದು ಟ್ವೀಟ್ ಮಾಡಿದ್ದಾರೆ.
ಆದರೆ, ಇದು ಸಂಪೂರ್ಣ ಸುಳ್ಳಿನ ಸುದ್ದಿ ಆಗಿದ್ದು, ಅಕ್ಷಯ್ ಕುಮಾರ್ ತಮಾಷೆಗಾಗಿ ರೋಹಿತ್ ಶೆಟ್ಟಿ ಜಗಳವಾಡಿರುವ ವಿಡಿಯೋ ಇದಾಗಿದೆ. ಸೂರ್ಯವಂಶಿ ಚಿತ್ರವನ್ನ ಕರಣ್ ಜೋಹರ್ ಹಾಗೂ ರೋಹಿತ್ ಶೆಟ್ಟಿ ನಿರ್ಮಿಸುತ್ತಿದ್ದು, ಮುಂದಿನ ವರ್ಷ ಮಾರ್ಚ್ 27 ರಂದು ಬಿಡುಗಡೆ ಆಗಲಿದೆ.ಬಾಲಿವುಡ್ ನಟರಾದ ರಣವೀರ್ ಸಿಂಗ್ ಹಾಗೂ ಅಜಯ್ ದೇವಗನ್ ಚಿತ್ರದಲ್ಲಿ ಅಭಿನಯಿಸುವ ಸಾಧ್ಯತೆ ಇದೆ
Advertisement