ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಯಶಸ್ವಿ: 11 ತಿಂಗಳ ಬಳಿಕ ತವರಿಗೆ ಮರಳಿದ ರಿಷಿ ಕಪೂರ್
ಮುಂಬೈ: ಬಾಲಿವುಡ್ ನಟ ರಿಷಿ ಕಪೂರ್ ಸುಮಾರು ಒಂದು ವರ್ಷಗಳ ಕಾಲ ವಿದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ್ದಾರೆ.
ರಿಷಿ ಕಪೂರ್, ಸುಮಾರು ಒಂದು ವರ್ಷದಿಂದ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ತಡರಾತ್ರಿ ತಮ್ಮ ಪತ್ನಿ ನೀತು ಕಪೂರ್ ಜೊತೆಗೆ ಮನೆಗೆ ಮರಳಿದ್ದಾರೆ.
ರಿಷಿ ಅವರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನೀತು, ತಮ್ಮ ಪತಿಯೊಂದಿಗೆ ವಿದೇಶದಲ್ಲಿದ್ದರು. ನಟ ರಿಷಿ ಕಪೂರ್ “11 ತಿಂಗಳು, 11 ದಿನಗಳ" ನಂತರ ಸ್ವದೇಶಕ್ಕೆ ಮರಳಿದ್ದಾರೆ.
ತಾವು ಭಾರತಕ್ಕೆ ಆಗಮಿಸಿದೊಡನೆ ನಟ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಸಂತಸವನ್ನು ಹಂಚಿಕೊಂಡಿದ್ದು “BACK HOME!!!!!! 11 Months 11days! Thank you all!” ಎಂದು ಬರೆದುಕೊಂಡಿದ್ದಾರೆ.
ಇನ್ನು ಕೆಲವು ವಾರಗಳ ಹಿಂದೆ, ರಿಷಿ ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಕ್ಯಾನ್ಸರ್ ವಿರುದ್ಧದ ಹೋರಾಟದ ಬಗ್ಗೆ ವಿವರಿಸಿದ್ದರು. “ನನಗೆ ಮಜ್ಜೆಯ ಕ್ಯಾನ್ಸರ್ ಆಗಿದ್ದು ಣಾನದನ್ನು ಗುಣಪಡಿಸಿಕೊಳ್ಲಬೇಕಿತ್ತು. ಆದರೆ ಅಂತಹ ಗಂಭೀರ ಏನೂ ಇರಲಿಲ್ಲ. ಆದರೆ ನೀವು ಹೆಚ್ಚು ಹೊತ್ತು ಕಾಯಲು ಸಾಧ್ಯವಿರಲಿಲ್ಲ. ಆದ್ದರಿಂದ ನಾನು ಇಲ್ಲಿ (ನ್ಯೂಯಾರ್ಕ್) ಗೆ ಬರಬೇಕಾಯಿತು.ನಾನಿಲ್ಲಿ ಚಿಕಿತ್ಸೆ ಪಡೆದಿದ್ದು ದೇವರ ಆಶೀರ್ವಾದದಿಂದ ಅದು ಯಶಸ್ವಿಯಾಗಿದೆ."
ಕ್ಯಾನ್ಸರ್ ರೋಗಿಗಳು ಧೈರ್ಯಗೆಡಬಾರದು. ಈ ದಿನಗಳಲ್ಲಿ ಅದನ್ನು ಸೂಕ್ತ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಿಕೊಳ್ಲಬಹುದಾಗಿದೆ ಎಂದು ನಟ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ