ಗುಳಿಕೆನ್ನೆ ಬೆಡಗಿ ದೀಪಿಕಾ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದೇಕೆ? 

ನಟಿ ದೀಪಿಕಾ ಪಡುಕೋಣೆಯ ಮುಂದಿನ ಬಹು ನಿರೀಕ್ಷಿತ ಚಿತ್ರ 'ಛಪಾಕ್'ನ ಟ್ರೇಲರ್ ಬಿಡುಗಡೆಯಾಗಿದ್ದು ಈ ಸಮಾರಂಭದಲ್ಲಿ ದೀಪಿಕಾ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
 

Published: 11th December 2019 10:41 AM  |   Last Updated: 11th December 2019 11:08 AM   |  A+A-


Deepika padukone cried during Chhapaak trailer release

ಸಮಾರಂಭದಲ್ಲಿ ಕಣ್ಣೀರು ಹಾಕಿದ ದೀಪಿಕಾ ಪಡುಕೋಣೆ

Posted By : Sumana Upadhyaya
Source : PTI

ಮುಂಬೈ: ನಟಿ ದೀಪಿಕಾ ಪಡುಕೋಣೆಯ ಮುಂದಿನ ಬಹು ನಿರೀಕ್ಷಿತ ಚಿತ್ರ 'ಛಪಾಕ್'ನ ಟ್ರೇಲರ್ ಬಿಡುಗಡೆಯಾಗಿದ್ದು ಈ ಸಮಾರಂಭದಲ್ಲಿ ದೀಪಿಕಾ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.


ದೇಶಾದ್ಯಂತ ಸುದ್ದಿ ಮಾಡಿರುವ ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಲಕ್ಷ್ಮಿ ಅಗರ್ ವಾಲ್ ಜೀವನಾಧಾರಿತ ಕಥೆ ಛಪಾಕ್ ಆಗಿದೆ. ಚಿತ್ರದ ಶೂಟಿಂಗ್, ಎದುರಾದ ಸನ್ನಿವೇಶ ಮತ್ತು ಲಕ್ಷ್ಮಿ ಅಗರ್ವಾಲ್ ಬದುಕಿನಲ್ಲಿ ಎದುರಾದ ಘಟನೆಗಳ ಬಗ್ಗೆ ನೆನೆದು ದೀಪಿಕಾ ಕಣ್ಣೀರು ಹಾಕಿದರು. 


ಬಾಲಿವುಡ್ ನಿರ್ದೇಶಕಿ ಮೇಘನಾ ಗುಲ್ಜಾರ್ ನಿರ್ದೇಶನದ ಛಪಾಕ್ ಚಿತ್ರಕ್ಕೆ ದೀಪಿಕಾ ಪಡುಕೋಣೆ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೊಸ್ ಬಂಡವಾಳ ಹೂಡಿದೆ. ವಿಕ್ರಾಂತ್ ಮಸ್ಸೆ ಲಕ್ಷ್ಮಿ ಅರರ್ಗಾಲ್ ಅವರ ಪತಿ ಅಮೊಲ್ ದೀಕ್ಷಿತ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.


ಛಪಾಕ್ ಚಿತ್ರ ಜನವರಿ 10, 2020ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp