ಬಾಲಿವುಡ್ ನಟ ಅಲೋಕ್ ನಾಥ್ ಗೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಮಂಜೂರು

ವಿಂತಾ ನಂದಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಲೋಕ್ ನಾಥ್ ಗೆ ಮಹಾರಾಷ್ಟ್ರದ ನ್ಯಾಯಾಲಯವೊಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಅಲೋಕ್ ನಾಥ್, ವಿಂತಾನಂದಾ
ಅಲೋಕ್ ನಾಥ್, ವಿಂತಾನಂದಾ
ಮುಂಬೈ: ವಿಂತಾ ನಂದಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಲೋಕ್ ನಾಥ್ ಗೆ ಮಹಾರಾಷ್ಟ್ರದ ನ್ಯಾಯಾಲಯವೊಂದು ನಿರೀಕ್ಷಣಾ  ಜಾಮೀನು ಮಂಜೂರು ಮಾಡಿದೆ.
ಕಳೆದ ವರ್ಷ ಡಿಸೆಂಬರ್ 14 ರಂದು 62 ವರ್ಷದ ಅಲೋಕ್ ನಾಥ್ , ದಿಂಡೊಸಿ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
19 ವರ್ಷಗಳ ಹಿಂದೆ ಅಲೋಕ್ ನಾಥ್ ತಮ್ಮ ಅತ್ಯಾಚಾರ ನಡೆಸಿದರು ಎಂದು ಆರೋಪಿಸಿ ವಿಂತಾ ನಂದಾ ನವೆಂಬರ್ 21 ರಂದು ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಈ ದೂರಿನ ಆಧಾರದ ಮೇಲೆ ಪೊಲೀಸರು ಕಥೆಗಾರ, ನಿರ್ಮಾಪಕ ಅಲೋಕ್ ನಾಥ್ ವಿರುದ್ಧ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com