ರಾಷ್ಟ್ರೀಯತೆಯನ್ನು ಎದೆತಟ್ಟಿ ಹೇಳಿದರೆ, ಅವಮಾನವೆಂಬಂತೆ ಬಿಂಬಿಸಲಾಗುತ್ತದೆ: ಕಂಗನಾ ರಣಾವತ್

ಕಂಗನಾ ರಣಾವತ್ ಅಭಿನಯದ ಬಹುನಿರೀಕ್ಷಿತ ಮಣಿಕಾರ್ನಿಕಾ ಚಿತ್ರದ ಸಾಂಗ್ ಬಿಡುಗಡೆ ಕಾರ್ಯಕ್ರಮ ಮುಂಬೈಯಲ್ಲಿ ಬುಧವಾರ ನಡೆಯಿತು.

Published: 10th January 2019 12:00 PM  |   Last Updated: 10th January 2019 03:52 AM   |  A+A-


Song Lauch

ಹಾಡುಗಳ ಬಿಡುಗಡೆ ಕಾರ್ಯಕ್ರಮ

Posted By : ABN ABN
Source : PTI
ಕಂಗನಾ ರಣಾವತ್ ಅಭಿನಯದ ಬಹುನಿರೀಕ್ಷಿತ ಮಣಿಕಾರ್ನಿಕಾ ಚಿತ್ರದ ಸಾಂಗ್ ಬಿಡುಗಡೆ ಕಾರ್ಯಕ್ರಮ ಮುಂಬೈಯಲ್ಲಿ ಬುಧವಾರ  ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯತೆ ಕುರಿತಂತೆ  ಮಾತನಾಡಿದ ರಣಾವತ್, ಇಂದಿನ ದಿನಗಳಲ್ಲಿ ರಾಷ್ಟ್ರೀಯತೆಯನ್ನು ಎದೆತಟ್ಟಿ ಹೇಳಿದರೆ, ಅವಮಾನವೆಂಬಂತೆ ಬಿಂಬಿಸಲಾಗುತ್ತದೆ ಎಂದು ಹೇಳಿದರು.

ಗೀತೆ ರಚನೆಕಾರ ಪ್ರಸೂನ್  ಜೋಶಿ ಹಾಗೂ ಕಥೆಗಾರ ವಿಜಯೇಂದ್ರ ಪ್ರಸಾದ್ ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದನ್ನು ತಾವೂ ಒಪ್ಪಿಕೊಳ್ಳುವುದಾಗಿ ತಿಳಿಸಿದರು.

ಯಾರಾದರೂ  ಯಾವುದೇ ರೀತಿಯ ಪ್ರೀತಿಯನ್ನು ಹೊಂದಿದ್ದರೆ ಅದನ್ನು ಅವಮಾನಿಸಬಾರದು ಎಂದು ಪ್ರಸೂನ್ ಜೋಶಿ ಸುಂದರವಾಗಿ ಹೇಳಿದ್ದಾರೆ. ಮೂರು ಬಣ್ಣಗಳಿಂದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ  ಏನು ಕೆಟ್ಟದು ಎಂದು ಪ್ರಶ್ನಿಸಿದ ರಣಾವತ್,  ನಾವು ಅದರ ಬಗ್ಗೆ ತಲೆತಗ್ಗಿಸಬಾರದು ಎಂದರು.

ಆಕೆಗೆ ಧ್ವನಿಗೂಡಿಸಿದ ಜೋಶಿ, ದೇಶದ ಮೇಲಿನ  ಪ್ರೀತಿ ಇಂದು ಅಶಾಂತಿ ಉಂಟುಮಾಡುತ್ತಿದೆ. ಯಾರೂ ಇದನ್ನ ಮಾಡುತ್ತಿದ್ದಾರೆ  ಎಂಬುದು ಗೊತ್ತಿಲ್ಲ. ಕೆಲವರು ಪ್ರೀತಿಗಾಗಿ ಅಶಾಂತಿ ಉಂಟುಮಾಡುತ್ತಿದ್ದಾರೆ. ಇದು ಎಂತಹ ರಾಷ್ಟ್ರೀಯತೆ ?  ಪ್ರೀತಿ ಇದ್ದರೆ ಅದು ಶಾಂತಪರಿಸ್ಥಿತಿಯಿಂದ ಇರಬೇಕು ಎಂದು ಹೇಳಿದರು. ದೇಶಕ್ಕಾಗಿ ಪ್ರೀತಿ ತೋರಿಸಲು ಹಲವಾರು ದಾರಿಗಳಿಗೆವೆ. ಆದರೆ, ಅದರಲ್ಲಿ ಒಂದನ್ನು ಕಡ್ಡಾಯವಾಗಿ ಮಾಡಿ ತೋರಿಸಬೇಕಾಗುತ್ತದೆ ಎಂದು  ಪ್ರಸೂನ್ ಜೋಶಿ  ತಿಳಿಸಿದರು.

ರಾಷ್ಟ್ರಗೀತೆ ಸಂದರ್ಭದಲ್ಲಿ ಎದ್ದುನಿಂತು ಗೌರವ ಸಲ್ಲಿಸದ ಜನರ ಮೇಲೆ ಹಲ್ಲೆ ಸೇರಿದಂತೆ ಅತಿಯಾದ ರಾಷ್ಟ್ರೀಯತೆ ಬಗ್ಗೆ ಮಾತನಾಡಿದ ರಣಾವತ್,  ಪ್ರೀತಿ ಅಂದರೆ ಪ್ರೀತಿ, ನಿಮ್ಮ ಸಂಗಾತಿಯನ್ನು ಪ್ರೀತಿಸುವುದು ಅಥವಾ ಸಂಗಡ ಬಯಸದೆ ಇರುವುದು ಅದು ನಿಮ್ಮಗೆ ಬಿಟ್ಟ ವಿಷಯ ಎಂದರು. ಸಂವಿಧಾನ ದೇವರು ಕೊಟ್ಟ ಉಡುಗೂರೆ ಅಥವಾ ಸ್ವರ್ಗದಿಂದ ಬಿದಿದ್ದಲ್ಲ, ನಾವೆಲ್ಲರೂ ಸೇರಿ ಮಾಡಿದ್ದೇವೆ. ಅದರಲ್ಲಿನ ತತ್ವಗಳನ್ನು ಅನುಸರಿಸಬೇಕಾದ ಅಗತ್ಯವಿದೆ ಎಂದು ರಣಾವತ್ ಇದೇ ವೇಳೆ ಹೇಳಿದರು.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp