ಭಾರತದ ಮಂಗಳಯಾನದ ಸತ್ಯ ಕಥೆಯಾದಾರಿತ 'ಮಿಷನ್ ಮಂಗಲ್ ' ಚಿತ್ರದ ಪೋಸ್ಟರ್ ಬಿಡುಗಡೆ

ಬಾಲಿವುಡ್ ನ ಬಹುನಿರೀಕ್ಷಿತ 'ಮಿಷನ್ ಮಂಗಲ್ ' ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ. ಭಾರತದ ಮಂಗಳಯಾನದ ಸತ್ಯ ಕಥೆಯಾದಾರಿತ ಮಿಷನ್ ಮಂಗಲ್ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎಂದು ಅಕ್ಷಯ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Published: 04th July 2019 12:00 PM  |   Last Updated: 04th July 2019 08:44 AM   |  A+A-


Poster

ಪೋಸ್ಟರ್

Posted By : ABN ABN
Source : ANI
ಮುಂಬೈ: ಬಾಲಿವುಡ್ ನ  ಬಹುನಿರೀಕ್ಷಿತ 'ಮಿಷನ್ ಮಂಗಲ್ '  ಚಿತ್ರದ ಪೋಸ್ಟರ್  ಬಿಡುಗಡೆ ಆಗಿದೆ. ಭಾರತದ ಮಂಗಳಯಾನದ ಸತ್ಯ ಕಥೆಯಾದಾರಿತ ಮಿಷನ್ ಮಂಗಲ್  ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎಂದು ಅಕ್ಷಯ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪೋಸ್ಟರ್ ನಲ್ಲಿ ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರ ಪೋಟೋಗಳಿದ್ದು,  ಕೆಳಗಡೆ ಮಂಗಳ ಗ್ರಹದ ಕ್ಷಕೆಯ ಸುತ್ತ ಗ್ರಹಗಳು ಸುತ್ತುತ್ತಿರುವಂತೆ ಕಾಣುತ್ತಿದೆ. ನೆಲದಿಂದ ಚಿಮ್ಮುತ್ತಿರುವ  ಉಡಾವಣಾ ವಾಹಕ  ಅಕ್ಷಯ್ ಕುಮಾರ್ ಹಾಗೂ ಇತರ ಕಲಾವಿದರನ್ನು  ವಿಂಗಡಿಸಿದಂತೆ ಕಾಣುತ್ತಿದ್ದು, ಪೋಸ್ಟರ್ ನ ಎರಡು ಕಡೆಗಳಲ್ಲಿ ನೀಲಿ ಬಣ್ಣಇದೆ. 

ಪೋಸ್ಟರ್ ನ ಮೊದಲ ಭಾಗದಲ್ಲಿ ಅಕ್ಷಯ್ ಕುಮಾರ್  ಸ್ವಲ್ಪ ಗಡ್ಡದೊಂದಿಗೆ ಲುಕ್ ಕೊಡುತ್ತಿದ್ದರೆ , ಮತ್ತೊಂದು ಪೋಸ್ಟರ್ ನಲ್ಲಿ ವಿದ್ಯಾಬಾಲನ್, ಸೋನಾಕ್ಷಿ ಸಿನ್ಹಾ, ತಾಪ್ಸೆ ಪನ್ನು,  ಶರ್ಮಾನ್ ಜೋಷಿ ಮತ್ತಿತರ ಕಲಾವಿದರ ಪೋಟೋಗಳಿವೆ.

ತನ್ನ ಮಗಳು ಹಾಗೂ ಆಕೆಯ ವಯಸ್ಸಿನ ಮಕ್ಕಳು ನಂಬಲಾಗದಂತಹ ಸತ್ಯಕಥೆಯಾದಾರಿತ ಚಿತ್ರವಾಗಿರುವುದಾಗಿ ಅಕ್ಷಯ್ ಕುಮಾರ್  ಹೇಳಿದ್ದಾರೆ.

ಭಾರತದ ಮಂಗಳಯಾನದ ಸತ್ಯ ಕಥೆಯಾದಾರಿತ ಈ ಚಿತ್ರದಲ್ಲಿ ಸಾಮಾನ್ಯರು ಹೇಗೆ  ಅತ್ಯುನ್ನತ ಮಟ್ಟದಲ್ಲಿ  ಸಾಧಿಸುತ್ತಾರೆ ಎಂಬುದನ್ನು ತೋರಿಸಲಾಗುತ್ತಿದೆ. ಎಸ್. ಶಂಕರ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಅಕ್ಷಯ್ ಕುಮಾರ್, ಆರ್, ಬಲ್ಕಿ ನಿರ್ಮಿಸುತ್ತಿದ್ದಾರೆ.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp