ನಾನು ಕ್ಷಮೆ ಕೇಳುವುದಿಲ್ಲ, ದಯವಿಟ್ಟು ನನ್ನ ಮೇಲೆ ನಿಷೇಧ ಹೇರಿ: ಕಂಗನಾ ರಾನಾವತ್

ತಮ್ಮ ಮುಂಬರುವ ಚಿತ್ರ ಜಡ್ಜ್ ಮೆಂಟಲ್ ಹೈ ಕ್ಯಾ ಕುರಿತು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರೊಡನೆ ನಡೆದ ವಾಗ್ವಾದ ...
ಕಂಗನಾ ರಾನಾವತ್
ಕಂಗನಾ ರಾನಾವತ್
ನವದೆಹಲಿ: ತಮ್ಮ ಮುಂಬರುವ ಚಿತ್ರ ಜಡ್ಜ್ ಮೆಂಟಲ್ ಹೈ ಕ್ಯಾ ಕುರಿತು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರೊಡನೆ ನಡೆದ ವಾಗ್ವಾದ ಮತ್ತು ಅದಕ್ಕೆ ಮನರಂಜನಾ ಪತ್ರಕರ್ತರ ಒಕ್ಕೂಟ ತಮ್ಮ ಮೇಲೆ ಹಾಕಿರುವ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ 'ಕ್ವೀನ್' ಕಂಗನಾ ರಾನಾವತ್ ಪ್ರತಿಕ್ರಿಯೆ ನೀಡಿದ್ದಾರೆ. 
ಕಂಗನಾ ರಾನಾವತ್ ಯಾವತ್ತಿಗೂ ನೇರ ಧೈರ್ಯದ ಮಾತುಗಳಿಗೆ ಹೆಸರಾದವರು. ಅದೇ ರೀತಿ ಅನೇಕ ವಾದ-ವಿವಾದಗಳನ್ನು ಸಹ ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. 
ಮೊನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ವಿಡಿಯೊದಲ್ಲಿ ಮಾತನಾಡಿರುವ ಅವರ ಮಾತುಗಳನ್ನು ಅವರ ಸೋದರಿ ಮ್ಯಾನೇಜರ್ ರಂಗೋಲಿ ಚಂಡೆಲಾ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. 
ಈ ಕುರಿತು ವಿಡಿಯೊದಲ್ಲಿ ಮಾತನಾಡಿರುವ ಅವರು ತಮ್ಮ ಎಂದಿನ ಶೈಲಿಯಂತೆ ಬೋಲ್ಡ್ ಆಗಿ ಮಾತನಾಡಿದ್ದು ''ಇಂದು ನಾನು ಭಾರತದ ಮಾಧ್ಯಮಗಳ ಕುರಿತು ಮಾತನಾಡಲು ಬಯಸುತ್ತೇನೆ. ಪ್ರತಿಯೊಂದು ಕಡೆಯಲ್ಲೂ ಉತ್ತಮ ಮತ್ತು ಕೆಟ್ಟ ಮನುಷ್ಯರಿರುತ್ತಾರೆ. ಮಾಧ್ಯಮಗಳು ಹಲವು ಬಾರಿ ನನ್ನನ್ನು ಉತ್ತೇಜಿಸಿದ್ದು ಸ್ಪೂರ್ತಿಯನ್ನು ತುಂಬಿವೆ. ಮಾಧ್ಯಮಗಳಲ್ಲಿ ನನಗೆ ಉತ್ತಮ ಸ್ನೇಹಿತರು ಮತ್ತು ಮಾರ್ಗದರ್ಶಕರು ಇದ್ದಾರೆ. ನನ್ನ ಯಶಸ್ಸಿನಲ್ಲಿ ಅವರ ಪಾತ್ರ ತುಂಬಾ ಮುಖ್ಯವಾಗಿದ್ದು ಅವರಿಗೆ ನಾನು ಆಭಾರಿಯಾಗಿದ್ದೇನೆ. 
ಕಳೆದ ವಾರ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಡೆದ ಘಟನೆ ಕುರಿತಂತೆ ನಾನು ಮಾತನಾಡಲು ಬಯಸುತ್ತೇನೆ. ಮಾಧ್ಯಮದ ಒಂದು ವರ್ಗ ಗೆದ್ದಲು ಹಿಡಿದಂತೆ ಕಾರ್ಯನಿರ್ವಹಿಸುತ್ತಿದ್ದು ಅವರು ದೇಶದ ಗೌರವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆಯುಂಟುಮಾಡುತ್ತಿರುತ್ತಾರೆ ಮತ್ತು ಆಗಾಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಾರೆ.ಅವರು ತಮ್ಮ ವಿಶ್ವಾಸಘಾತುಕ ಅಭಿಪ್ರಾಯಗಳನ್ನು ಎಲ್ಲರ ಮುಂದೆ ಪ್ರಸ್ತುತಪಡಿಸುತ್ತಾರೆ. ನಮ್ಮ ಸಂವಿಧಾನದಲ್ಲಿ ಅವರಿಗೆ ಯಾವುದೇ ಷರತ್ತುಗಳನ್ನು ಹೊಂದಿಲ್ಲ ಮತ್ತು ಉದಾರವಾದಿಗಳು ಎಂದು ಕರೆಯಲ್ಪಡುವ ಈ ಜನರನ್ನು ನಾನು ಅಪಾಯಕಾರಿ ಎಂದು ಭಾವಿಸುತ್ತೇನೆ.
ನಾನು ಇಂದು ಮಾತನಾಡುತ್ತಿರುವ ಪತ್ರಕರ್ತ ದೆಹಲಿಯಲ್ಲಿ ಭೇಟಿಯಾಗಿದ್ದೆ. ಅವರು ನನ್ನ ಗಂಭೀರ ಕ್ರಮಗಳನ್ನು ಗೇಲಿ ಮಾಡುತ್ತಿರುತ್ತಾರೆ. ನಾನು ಇತ್ತೀಚೆಗೆ ಪ್ಲಾಸ್ಟಿಕ್ ನಿಷೇಧಕ್ಕಾಗಿ ಪ್ರಚಾರ ಮಾಡಿದಾಗ, ಗೋ ಹತ್ಯೆ ನಿಷೇಧದ ವಿರುದ್ಧ ಮಾತನಾಡಿದಾಗ ಅದನ್ನು ಅಪಹಾಸ್ಯ ಮಾಡಿದರು, ಪ್ರಾಣಿಗಳ ಕ್ರೌರ್ಯದ ವಿರುದ್ಧದ ನನ್ನ ಅಭಿಯಾನವನ್ನೂ ಅವರು ಗೇಲಿ ಮಾಡಿದರು. 
“ಇಂತವರು ವೃತ್ತಿಪರ ಪತ್ರಕರ್ತರಲ್ಲ, ಅವರು ಕಸದ ರಾಶಿಯಂತೆ ಇರುವವರು, ಇನ್ನೊಬ್ಬರ ಮೇಲೆ ವೈಯಕ್ತಿಕ ಆಕ್ರಮಣ ನಡೆಸುತ್ತಾರೆ. ಬಿಟ್ಟಿ ಊಟ ಸಿಗುತ್ತದೆ ಎಂದು ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸುತ್ತಾರೆ. ಪತ್ರಕರ್ತರಾಗಿ ತಮ್ಮ ಅಸ್ತಿತ್ವವನ್ನು ಪ್ರಮಾಣೀಕರಿಸಲು ಈ ಜನರಿಗೆ ಯಾವುದೇ ಕೆಲಸವಿಲ್ಲ. ನಾನು ಕಲಾವಿದನೆಂದು ಕರೆದರೆ, ನನಗೆ ಸ್ವಲ್ಪ ಕೆಲಸ ಇರಬೇಕು. ದಯವಿಟ್ಟು ನೀವು ಬರೆದ ಒಂದು ಲೇಖನವನ್ನು ನನಗೆ ತೋರಿಸಿ! ನಿಮ್ಮನ್ನು ಪತ್ರಕರ್ತ ಎಂದು ಹೇಗೆ ಕರೆಯಬಹುದು? ರಾಷ್ಟ್ರ ವಿರೋಧಿಗಳ ವಿರುದ್ಧ ನನಗೆ ಶೂನ್ಯ ಸಹಿಷ್ಣುತೆ ಇರುವುದರಿಂದ ಅವರ ಪ್ರಶ್ನೆಗೆ ಉತ್ತರಿಸಲು ನಾನು ನಿರಾಕರಿಸಿದ್ದೇನೆ. ಈ ಮೂರು ಅಥವಾ ನಾಲ್ಕು ಜನರು ನನ್ನ ವಿರುದ್ಧ ಒಂದು ಸಂಘವನ್ನು ರಚಿಸಿದರು. ಅದು ನಿನ್ನೆ ರೂಪುಗೊಂಡಿದ್ದು ಅದಕ್ಕೆ ಯಾವುದೇ ಮಾನ್ಯತೆಯಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಕಂಗನಾ ಖಾರವಾಗಿ ನುಡಿದಿದ್ದಾರೆ. 
ಮತ್ತೊಂದು ವಿಡಿಯೊದಲ್ಲಿ ಕಂಗನಾ “ಈ ಜನರು ನನ್ನನ್ನು ನಿಷೇಧಿಸುವುದಾಗಿ, ನನ್ನ ವೃತ್ತಿಜೀವನವನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಮನಸ್ಸು ಮಾಡಿದರೆ ವಿಶ್ವಾಸಘಾತುಕರಾದ ನಿಮ್ಮಂತವರನ್ನು ಖರೀದಿಸಲು ಒಬ್ಬರಿಗೆ ಲಕ್ಷಾಂತರ ರೂಪಾಯಿಗಳ ಅಗತ್ಯವಿಲ್ಲ, ನೀವು 50-60 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಮಾರಾಟವಾಗುವಂತಹ ಪತ್ರಕರ್ತರು. ನಿಮ್ಮ ಮತ್ತು ಚಲನಚಿತ್ರ ಮಾಫಿಯಾದಂತಹ ಹುಸಿ ಪತ್ರಕರ್ತರು ಮಾತ್ರ ಇದ್ದಿದ್ದರೆ ಇಂದು ನಾನು ಅತಿ ಹೆಚ್ಚು ಸಂಭಾವನೆ ಪಡೆಯುವ ಉನ್ನತ ನಟಿಯಾಗುತ್ತಿರಲಿಲ್ಲ.  ದಯವಿಟ್ಟು ನನ್ನ ಮೇಲೆ ನಿಷೇಧ ಹೇರುವುದಾದರೆ ಹೇರಿಕೊಳ್ಳಿ, ನನ್ನ ಕಾರಣದಿಂದಾಗಿ ನಿಮ್ಮ ಮನೆಯವರಿಗೆ ಆಹಾರವಿಲ್ಲದಂತೆ ಆಗುವುದು ಬೇಡ ಎಂದು ಹೇಳಿ ವಿವಾದಕ್ಕೆ ತಮ್ಮ ಕಡೆಯಿಂದ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com