ಸಣ್ಣದೊಂದು ನಿರ್ಲಕ್ಷವೇ ದುರಂತದ ಮೂಲವಾಯ್ತು! ಪ್ಲ್ಯಾಸ್ಟಿಕ್ ಆಟಿಕೆ ನುಂಗಿ ಕಿರುತೆರೆ ನಟನ 2 ವರ್ಷದ ಮಗು ಸಾವು

ಒಂದೇ ಒಂದು ಸಣ್ಣ ನಿರ್ಲಕ್ಷದಿಂದ ಕಿರುತೆರೆ ನಟನೊಬ್ಬನ ಇಡೀ ಕುಟುಂಬ ಇಂದು ದುಃಖದಲ್ಲಿ ಮುಳುಗಿದೆ. ಪ್ಲ್ಯಾಸ್ಟಿಕ್ ಆಟಿಕೆ ಜತೆ ಆಟವಾಡುತ್ತಿದ್ದ ಕಿರುತೆರೆ ನಟ ಪ್ರತಿಶ್ ವೊರಾ ಅವರ 2 ವರ್ಷದ ಮಗು.....

Published: 09th May 2019 12:00 PM  |   Last Updated: 09th May 2019 08:10 AM   |  A+A-


Pyaar Ke Papad actor Pratish Vora's 2-year-old daughter dies in unfortunate accident

ಪ್ಲ್ಯಾಸ್ಟಿಕ್ ಆಟಿಕೆ ನುಂಗಿ ಕಿರುತೆರೆ ನಟನ 2 ವರ್ಷದ ಮಗು ಸಾವು

Posted By : RHN RHN
Source : Online Desk
ಮುಂಬೈ: ಒಂದೇ ಒಂದು ಸಣ್ಣ ನಿರ್ಲಕ್ಷದಿಂದ ಕಿರುತೆರೆ ನಟನೊಬ್ಬನ ಇಡೀ ಕುಟುಂಬ ಇಂದು ದುಃಖದಲ್ಲಿ ಮುಳುಗಿದೆ. ಪ್ಲ್ಯಾಸ್ಟಿಕ್ ಆಟಿಕೆ ಜತೆ ಆಟವಾಡುತ್ತಿದ್ದ ಕಿರುತೆರೆ ನಟ ಪ್ರತಿಶ್ ವೊರಾ ಅವರ 2 ವರ್ಷದ ಮಗು ಆಕಸ್ಮಿಕವಾಗಿ ಆಟಿಕೆಯನ್ನು ನುಂಗಿ ಅದನ್ನು ಮತ್ತೆ ಹೊರತೆಗೆಯಲಾಗದೆ ಸಾವನ್ನಪ್ಪಿದೆ.

ಈ ಕುರಿತಂತೆ ಪ್ರತಿಕ್ರಯಿಸಿರುವ ನಟ ಪ್ರತಿಶ್ "ಕಳೆದ ರಾತ್ರಿ ನನ್ನ ಮಗಳು ತಾನಾಡುತ್ತಿದ್ದ ಪ್ಲಾಸ್ಟಿಕ್ ಗೊಂಬೆಯೊಂದರ ಚೂರನ್ನು ನುಂಗಿದ್ದಾಳೆ, ಮತ್ತೆ ಅದನ್ನು ತೆಗೆಯಲಾಗದೆ ಹೋಗಿ ಅವಳು ಸಾವಿಗೀಡಾಗಿದ್ದಾಳೆ. ದಯವಿಟ್ಟು ಅವಳಿಗಾಗಿ ದೇವರನ್ನು ಪ್ರಾರ್ಥಿಸಿ" ಎಂದರು.

'ಪ್ಯಾರ್ ಕೆ ಪಾಪಡ್' ಎಂಬ ಜನಪ್ರಿಯ ಟಿವಿಶೋ ನಲ್ಲಿ ಅಭಿನಯಿಸುತ್ತಿರುವ ವೊರಾ ಇದರಲ್ಲಿ ನಂದು ಗುಪ್ತಾ ಪಾತ್ರಧಾರಿಯಾಗಿದ್ದಾರೆ. ತಾರಕ್ ಮೆಹ್ತಾ ಕಾ ಔಲ್ತಾ ಚಶ್ಮಾ ಮತ್ತು ಕ್ರೈಮ್ ಪೆಟ್ರೋಲ್ ಮುಂತಾದ ಕಾರ್ಯಕ್ರಮಗಳಲ್ಲಿ ಸಹ ಅವರು ಪಾತ್ರವಹಿಸಿದ್ದರು.
facebook twitter whatsapp