ಚುನಾವಣೆ ಮುಗಿದು ವಾರದ ಬಳಿಕ ಪ್ರಗ್ಯಾ ವಿರುದ್ಧ ಮತಹಾಕುವಂತೆ ಫರ್ಹಾನ್ ಅಖ್ತರ್ ಟ್ವೀಟ್, ಟ್ರೋಲ್

ಬಾಲಿವುಡ್ ನಟ ಫರ್ಹಾನ್ ಅಖ್ತರ್ ಅವರು ಮಧ್ಯ ಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಗಿದು ಒಂದು ವಾರದ ಬಳಿಕ...

Published: 20th May 2019 12:00 PM  |   Last Updated: 20th May 2019 04:31 AM   |  A+A-


'Save Bhopal, vote against Sadhvi Pragya', tweets Farhan Akhtar week after elections, gets trolled

ಫರ್ಹಾನ್ ಅಖ್ತರ್

Posted By : LSB LSB
Source : The New Indian Express
ಮುಂಬೈ: ಬಾಲಿವುಡ್ ನಟ ಫರ್ಹಾನ್ ಅಖ್ತರ್ ಅವರು ಮಧ್ಯ ಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಗಿದು ಒಂದು ವಾರದ ಬಳಿಕ, ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ಮತ ಚಲಾಯಿಸುವಂತೆ ಟ್ವೀಟ್ ಮಾಡುವ ಮೂಲಕ ಸಾಮಾಜಿಕ ತಾಣದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ. 

ಭೋಪಾಲ್ ಮತದಾರರೆ, ಭೋಪಾಲ್ ನಗರವನ್ನು ಮತ್ತೊಂದು ಮಹಾನ್ ಅನಿಲ್ ದುರಂತದಿಂದ ರಕ್ಷಿಸುವ ಸಮಯ ಬಂದಿದೆ ಎಂದು ಫರ್ಹಾನ್ ಅಖ್ತರ್ ಅವರು ಭಾನುವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಆ ಟ್ವೀಟ್ ನಲ್ಲಿ #SayNoToPragya #SayNoToGodse #RememberTheMahatma #ChooseLoveNotHate ಎಂಬ ಹ್ಯಾಷ್ ಟ್ಯಾಗ್ ಗಳನ್ನು ಅವರು ಬಳಸಿದ್ದಾರೆ.

ಫರ್ಹಾನ್ ಅಖ್ತರ್ ಅವರ ಈ ಟ್ವೀಟ್ ಇದೀಗ ಸಾಮಾಜಿಕ ತಾಣದಲ್ಲಿ ಭಾರಿ ಟ್ರೋಲ್ ಗೆ ಗುರಿಯಾಗಿದ್ದು, ಬಹಳ ಮುಂಚೆಯೇ ಟ್ವೀಟ್ ಮಾಡಿದ್ದೀರಿ. 2024ಕ್ಕೆ ಇದೇ ಟ್ವೀಟ್ ಅನ್ನು ರಿಟ್ವೀಟ್ ಮಾಡಿಕೊಳ್ಳಿ ಎಂದು ನೆಟ್ಟಿಗರು ಗೇಲಿ ಮಾಡಿದ್ದಾರೆ.

ಭೋಪಾಲ್ ಲೋಕಸಭಾ ಕ್ಷೇತ್ರಕ್ಕೆ ಆರನೇ ಹಂತದಲ್ಲಿಯೇ ಮತದಾನ ನಡೆದಿತ್ತು. ಆದರೆ ಅವರು ನಿನ್ನೆ ನಡೆದ ಏಳನೆ ಹಂತದಲ್ಲಿ ಭೋಪಾಲ್ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ ಎಂದು ಭಾವಿಸಿ ಟ್ವೀಟ್ ಮಾಡಿದ್ದಾರೆ.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp