2019ರ ಲೋಕಸಭೆ ಚುನಾವಣೆ ಕುರಿತು ನ್ಯಾಷನಲ್ ಜಿಯೊಗ್ರಫಿ ಚಾನೆಲ್ ನಿಂದ ಸಾಕ್ಷ್ಯಚಿತ್ರ

ಭಾರತದ 2019ರ ಸಾರ್ವತ್ರಿಕ ಚುನಾವಣೆ ಕುರಿತು ಸಾಕ್ಷ್ಯಚಿತ್ರ ತಯಾರಿಸಲಾಗುತ್ತಿದ್ದು ಅದನ್ನು ...

Published: 24th May 2019 12:00 PM  |   Last Updated: 24th May 2019 02:58 AM   |  A+A-


Women show their voter identity cards as they stand in a queue at a polling station.

ಮತಗಟ್ಟೆಯೊಂದರಲ್ಲಿ ಮತದಾನಕ್ಕೆ ಸಾಲುಗಟ್ಟಿ ನಿಂತಿರುವ ಮಹಿಳೆಯರು

Posted By : SUD SUD
Source : The New Indian Express
ನವದೆಹಲಿ: ಭಾರತದ 2019ರ ಸಾರ್ವತ್ರಿಕ ಚುನಾವಣೆ ಕುರಿತು ಸಾಕ್ಷ್ಯಚಿತ್ರ ತಯಾರಿಸಲಾಗುತ್ತಿದ್ದು ಅದನ್ನು ಸದ್ಯದಲ್ಲಿಯೇ ಪ್ರಸಾರ ಮಾಡಲಾಗುವುದು ಎಂದು ನ್ಯಾಷನಲ್ ಜಿಯೊಗ್ರಫಿ ಚಾನೆಲ್ ಹೇಳಿದೆ.

ದೇಶದ 37 ಕಡೆಗಳಲ್ಲಿ ಚಿತ್ರೀಕರಿಸಲಾಗಿದ್ದು ಚುನಾವಣೆಯ ವಿವಿಧ ವಿಷಯಗಳನ್ನು ಸೆರೆಹಿಡಿಯಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳಿಂದ ಹಿಡಿದು ರಾಜಕೀಯ ನಾಯಕರುಗಳಿಂದ ಹಿಡಿದು ತಳಮಟ್ಟದ ಪಕ್ಷದ ಕಾರ್ಯಕರ್ತರವರೆಗೆ, ಮೊದಲ ಬಾರಿ ಮತದಾನ ಮಾಡುವವರಿಂದ ಹಿಡಿದು 100 ವರ್ಷದ ವಯೋವೃದ್ಧ ಮತದಾರರವರೆಗೂ ಮಾತನಾಡಿಸಿ ಹಲವು ಸಂಗತಿಗಳನ್ನು ಸೆರೆಹಿಡಿಯಲಾಗಿದೆ.

ದೆಹಲಿಯ ಭಾರತೀಯ ಚುನಾವಣಾ ಆಯೋಗ, ಭಾರತ-ಚೀನಾ ಗಡಿಭಾಗ, ಉತ್ತರ ಪ್ರದೇಶ, ತಮಿಳುನಾಡು, ಛತ್ತೀಸ್ ಗಢ ರಾಜ್ಯಗಳಲ್ಲಿ ಸಹ ಹಲವು ವಿಷಯಗಳನ್ನು ಸೆರೆಹಿಡಿಯಲಾಗಿದೆ. ರಾಜಕೀಯ ಪಕ್ಷಗಳ ಕಚೇರಿಗಳು, ರಾಜಕೀಯ ಚುನಾವಣಾ ರ್ಯಾಲಿಗಳು, ಸೋಷಿಯಲ್ ಮೀಡಿಯಾಗಳ ಪಾತ್ರ ಮತ್ತು ಮತದಾರರನ್ನು ಸೆಳೆಯಲು ಬಳಸಿಕೊಂಡಿರುವ ಹೊಸ ತಂತ್ರಜ್ಞಾನಗಳ ಮೂಲಕ ರಾಜಕೀಯ ನಾಯಕರುಗಳ ಸಂಸತ್ತು ಪ್ರವೇಶಗಳನ್ನು ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗುತ್ತಿದೆ.

ಸ್ಟಾರ್ ಇಂಡಿಯಾದ ಇನ್ನೊವೇಶನ್ ಅಂಡ್ ಸ್ಟ್ರಾಟಜಿಯ ಅಧ್ಯಕ್ಷೆ ಗಾಯತ್ರಿ ಯಾದವ್, ಪ್ರಜಾಪ್ರಭುತ್ವದ ಕಥೆಯನ್ನು ದೇಶದ ಜನರಿಗೆ ತೋರಿಸಲು ನಾವು ಉತ್ಸುಕರಾಗಿದ್ದೇವೆ. ಇಂದಿನ ಜಗತ್ತಿಗೆ ಇದು ಪ್ರಸ್ತುತವಾಗಿದೆ ಎಂದರು.

ದೇಶಾದ್ಯಂತ ಏಳು ಹಂತಗಳಲ್ಲಿ 2019ರ ಲೋಕಸಭೆ ಚುನಾವಣೆ ನಡೆದು 8 ಸಾವಿರ ಅಭ್ಯರ್ಥಿಗಳು 542 ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ. ದೇಶದಲ್ಲಿ ಒಟ್ಟಾರೆ ಶೇಕಡಾ 67.11ರಷ್ಟು ಮತದಾನವಾಗಿದೆ.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp