ತೇಜಾಬ್ ಚಿತ್ರಕ್ಕೆ 31 ವರ್ಷ: ಮತ್ತೊಮ್ಮೆ ‘ಏಕ್ ದೋ ತೀನ್’ ಗೆ ಹೆಜ್ಜೆ ಹಾಕಿದ ಮಾಧುರಿಯಿಂದ ಅಭಿಮಾನಿಗಳಿಗೆ ಚಾಲೆಂಜ್!

 ‘ಏಕ್ ದೋ ತೀನ್..’ ಎಂದು ನರ್ತಿಸಿ ಚಿತ್ರ ರಸಿಕರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ ಬಾಲಿವುಡ್ ಹಿರಿಯ ನಟಿ ಮಾಧುರಿ ದೀಕ್ಷಿತ್ ಅವರಿಗೆ ಆ ಹಾಡು ಹಾಗೂ ಹೊಸ ಗುರುತನ್ನು ನೀಡಿದ ‘ತೇಜಾಬ್’ ಚಿತ್ರ ಪ್ರದರ್ಶನಗೊಂಡು 31 ವರ್ಷಗಳು ಸಂದಿವೆ.

Published: 12th November 2019 12:29 PM  |   Last Updated: 12th November 2019 12:29 PM   |  A+A-


ತೇಜಾಬ್ ಚಿತ್ರಕ್ಕೆ 31 ವರ್ಷ: ಮತ್ತೊಮ್ಮೆ ‘ಏಕ್ ದೋ ತೀನ್’ ಗೆ ಹೆಜ್ಜೆ ಹಾಕಿದ ಮಾಧುರಿಯಿಂದ ಅಭಿಮಾನಿಗಳಿಗೆ ಚಾಲೆಂಜ್!

Posted By : Raghavendra Adiga
Source : UNI

‘ಏಕ್ ದೋ ತೀನ್..’ ಎಂದು ನರ್ತಿಸಿ ಚಿತ್ರ ರಸಿಕರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ ಬಾಲಿವುಡ್ ಹಿರಿಯ ನಟಿ ಮಾಧುರಿ ದೀಕ್ಷಿತ್ ಅವರಿಗೆ ಆ ಹಾಡು ಹಾಗೂ ಹೊಸ ಗುರುತನ್ನು ನೀಡಿದ ‘ತೇಜಾಬ್’ ಚಿತ್ರ ಪ್ರದರ್ಶನಗೊಂಡು 31 ವರ್ಷಗಳು ಸಂದಿವೆ.

1988ರಲ್ಲಿ ಪ್ರದರ್ಶನಗೊಂಡ ಎನ್.ಚಂದ್ರ ನಿರ್ದೇಶನದ ತೇಜಾಬ್ ಚಿತ್ರದಲ್ಲಿ ಅನಿಲ್ ಕಪೂರ್ ಹಾಗೂ ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರದಲ್ಲಿದ್ದರು. ಚಿತ್ರ ತೆರೆಕಂಡು 31 ವರ್ಷ ಪೂರೈಸಿದ ಸಮಯದಲ್ಲಿ ಅನಿಲ್ ಕಪೂರ್ ಹಾಗೂ ಮಾಧುರಿ ದೀಕ್ಷಿತ್ ಇಬ್ಬರೂ ಟ್ವಿಟ್ತರ್ ನಲ್ಲಿ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.

ಲಕ್ಷ್ಮೀಕಾಂತ್ ಶಾಂತಾರಾಮ್ ಕುಡಲ್ಕರ್, ಲಕ್ಷ್ಮೀಕಾಂತ್-ಪ್ಯಾರೆಲಾಲ್ಮತ್ತು ನಿರ್ಮಾಪಕ ದಿನೇಶ್ ಗಾಂಧಿ ಅವರುಗಳಿಗೆ ಅನಿಲ್ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಗೀತೆಗೆ ಸಾಹಿತ್ಯ ರಚಿಸಿದ ಜಾವೇದ್ ಅಖ್ತರ್ ಅವರಿಗೆ ಸಹ ಸ್ಪೆಷಲ್ ಥ್ಯಾಂಕ್ಸ್ ಹೇಳೀದ್ದಾರೆ.

ಇನ್ನು ಮಾಧುರಿ ದೀಕ್ಷಿತ್ ತಮ್ಮ ಈ ಚಿತ್ರದ ಕುರಿತ ಸಂಭ್ರಮಾಚರಣೆಗೆ ಇನ್ನೊಂದು ಮೋಜಿನ ಮಾರ್ಗವನ್ನು ಕಂಡುಕೊಂಡಿದ್ದಾರೆ. ಮಾಧುರಿ ತನ್ನ ಏಕ್ ದೋ ತೀನ್ ಹಾಡನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಲ್ಲದೆ ಅಭಿಮಾನಿಗಳಿಗೆ ಈ ಮುಖೇನ ಟಿಕ್ ಟಾಕ್ ಸವಾಲನ್ನು ನೀಡಿದ್ದಾರೆ.ಅಭಿಮಾನಿಗಳು ಈ ಹಾಡಿಗೆ ತಾವು ನೃತ್ಯ ಆಡುವುದನ್ನು ವೀಡಿಯೋ ಂಆಡಿ ಅದನ್ನು ಹಂಚಿಕೊಳ್ಲಬೇಕೆಂದು ನಟಿ ಸೂಚಿಸಿದಿದ್ದಾರೆ.

ಇದು ನನ್ನ ಪಾಲಿನ ವಿಶೇಷ ಹಾಡು.ಆದ್ದರಿಂದ ಇಂದು, ನಾನು ತೇಜಾಬ್ ಚಿತ್ರದ ಬಿಡುಗಡೆ ಸಂಭ್ರಮವನ್ನು ವಿಶೇಷವಾಗಿ ಆಚರಿಸುತ್ತೇನೆ. 31YearsOfTezaab ಅನ್ನು @TikTok_IN ನಲ್ಲಿ ಮೋಜಿನ ನೃತ್ಯ ಸವಾಲಿನೊಂದಿಗೆ  ಆಚರಿಸಲು ನನ್ನ ಅಭಿಮಾನಿಗಳಿಗೆ ಈ ಮೂಲಕ ಕೇಳುತ್ತಿದ್ದೇನೆ, ಅಭಿಮಾನಿಗಳು ನೃತ್ಯ ಮಾಡಿ ಹಾಗೂ ಅದರ ವೀಡಿಯೋವನ್ನು  #EkDoTeenChallenge ಟ್ಯಾಗ್ ಬಳಕೆ ಮಾಡಿ ಹಂಚಿಕೊಳ್ಳಿ. ನಿಮ್ಮಲ್ಲಿ ಕೆಲವರು ನನ ಕಡೆಯಿಂದ ಅಚ್ಚರಿಯೊಂದನ್ನು ಪಡೆಯಲಿದ್ದೀರಿ ಎಂದು ನಟಿ ಟ್ವೀಟ್ ಮೂಲಕ ಸಂದೇಶ ತಿಳಿಸಿದ್ದಾರೆ.

 


 

 

Stay up to date on all the latest ಬಾಲಿವುಡ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp