ಫಾರ್ಚುನ್ ಇಂಡಿಯಾ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಅನುಷ್ಕಾ ಶರ್ಮಾ

ಫಾರ್ಚುನ್ ಇಂಡಿಯಾ ನಿಯತಕಾಲಿಕೆ 2019ನೇ ಸಾಲಿನ ಅತ್ಯಂತ ಪ್ರಭಾವಶಾಲಿ 50 ಮಹಿಳಾ ಉದ್ಯಮಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ...
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ

ಮುಂಬೈ: ಫಾರ್ಚುನ್ ಇಂಡಿಯಾ ನಿಯತಕಾಲಿಕೆ 2019ನೇ ಸಾಲಿನ ಅತ್ಯಂತ ಪ್ರಭಾವಶಾಲಿ 50 ಮಹಿಳಾ ಉದ್ಯಮಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಸ್ಥಾನ ಪಡೆದಿದ್ದಾರೆ.

2008ರಲ್ಲಿ ತೆರೆಕಂಡ 'ರಬ್ ನೆ ಬನಾ ಡಿ ಜೋಡಿ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಅನುಷ್ಕಾ ಶರ್ಮಾ ಅವರು ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 39ನೇ ಸ್ಥಾನ ಪಡೆದಿದ್ದಾರೆ ಮತ್ತು ಈ ಪಟ್ಟಿಯಲ್ಲಿ ಸ್ಥಾನ ಪಡೆದ ಅತ್ಯಂತ ಕಿರಿಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಅನುಷ್ಕಾ ಶರ್ಮಾ ಅವರು ನುಶ್ ಮತ್ತು ನಿವಿಯಾ, ಎಲ್ಲೆ 18, ಮೈಂಟ್ರಾ ಮತ್ತು ಲೇವಿಯಂತಹ ಹಲವಾರು ಬ್ರಾಂಡ್‌ಗಳಿಗೆ ರಾಯಭಾರಿ ಮಾತ್ರವಲ್ಲ, ನಿರ್ಮಾಪಕಿಯೂ ಹೌದು. ಶರ್ಮಾ ಅವರು ತಾವು 25ನೇ ವರ್ಷದಲ್ಲಿದ್ದಾಗ ಸ್ಥಾಪಿಸಿದ ಕ್ಲೀನ್ ಸ್ಲೇಟ್ ಫಿಲ್ಮ್ಸ್, ಮೂರು ಸಣ್ಣ-ಬಜೆಟ್ ಹಿಂದಿ ಚಲನಚಿತ್ರಗಳನ್ನು ನಿರ್ಮಿಸಿದೆ. ಎನ್ಎಚ್ 10, 'ಫಿಲ್ಲೌರಿ' ಮತ್ತು 'ಪರಿ' ಎಂಬ ಮೂರು ಚಿತ್ರಗಳನ್ನು ಅನುಷ್ಕಾ ಶರ್ಮಾ ನಿರ್ಮಿಸಿದ್ದರು ಎಂದು ಫಾರ್ಚೂನ್ ಇಂಡಿಯಾ ನಟಿಯ ಬಗ್ಗೆ ಬರೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com