ಇದೊಳ್ಳೆ 'ರಾಮಾಯಣ', ಹನುಮಂತ ಸಂಜೀವಿನಿ ಯಾರಿಗೆ ತಂದದ್ದು ಗೊತ್ತಿಲ್ಲ; ಸೋನಾಕ್ಷಿ ಸಿನ್ಹಾ ವಿರುದ್ಧ ಟೀಕೆ!

ಹಿಂದಿ ವಾಹಿನಿಯಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಕಂತಿನಲ್ಲಿ ಇತ್ತೀಚೆಗೆ ಹಿರಿಯ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಪುತ್ರಿ ನಟಿ ಸೋನಾಕ್ಷಿ ಸಿನ್ಹಾ ಆಟವಾಡಲು ಬಂದಿದ್ದರು.

Published: 21st September 2019 03:31 PM  |   Last Updated: 22nd September 2019 11:23 AM   |  A+A-


Sonakshi Sinha

ಸೋನಾಕ್ಷಿ ಸಿನ್ಹಾ

Posted By : Sumana Upadhyaya
Source : IANS

ಮುಂಬೈ: ಹಿಂದಿ ವಾಹಿನಿಯಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಕಂತಿನಲ್ಲಿ ಇತ್ತೀಚೆಗೆ ನಟಿ ಸೋನಾಕ್ಷಿ ಸಿನ್ಹಾ ಆಟವಾಡಲು ಬಂದಿದ್ದರು. ಅದರಲ್ಲಿ ರಾಮಾಯಣಕ್ಕೆ ಸಂಬಂಧಪಟ್ಟ ಸುಲಭ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೆ ಸೋನಾಕ್ಷಿ ಸಿನ್ಹಾ ಟ್ವಿಟ್ಟರ್ ನಲ್ಲಿ ಟ್ರೋಲ್ ಗೆ ನೆಟಿಜನ್ ಗಳ ಟೀಕೆಗೆ ಗುರಿಯಾಗಿದ್ದಾರೆ.

ಹಾಟ್ ಸೀಟ್ ನಲ್ಲಿ ರಾಜಸ್ತಾನದ ಕುಶಲಕರ್ಮಿ ಮಹಿಳೆ ರುಮಾ ದೇವಿ ಜೊತೆ ಸೋನಾಕ್ಷಿ ಹಾಟ್ ಸೀಟ್ ನಲ್ಲಿ ಕುಳಿತಿದ್ದರು. ಆಗ ಅಮಿತಾಬ್ ಬಚ್ಚನ್, ರಾಮಾಯಣದಲ್ಲಿ ಹನುಮಂತನು ಸಂಜೀವಿನಿ ಮದ್ದನ್ನು ಯಾರಿಗೆ ತಂದುಕೊಟ್ಟರು ಎಂದು ಕೇಳಿದರು. ಸೋನಾಕ್ಷಿ ಸಿನ್ಹಾ ಮತ್ತು ಪಕ್ಕದಲ್ಲಿ ಕುಳಿತ ಮಹಿಳೆ ಇಬ್ಬರೂ ಪ್ರಶ್ನೆಯಿಂದ ವಿಚಲಿತಗೊಂಡರು. ಲೈಫ್ ಲೈನ್ ಬಳಸಿದರು.

ಈ ವಿಡಿಯೊ ಟ್ವಿಟ್ಟರ್ ನಲ್ಲಿ ಸಾಕಷ್ಟು ವೈರಲ್ ಆಗಿದ್ದು #YoSonakshiSoDumb ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಟೀಕಿಸುತ್ತಿದ್ದಾರೆ. ತಮ್ಮ ಕಳಂಕ ಸಿನಿಮಾಕ್ಕೆ ಸರಿಯಾಗಿ ಸೋನಾಕ್ಷಿ ನ್ಯಾಯ ಒದಗಿಸಿದ್ದಾರೆ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ಪುಸ್ತಕವನ್ನು ಅದರ ಮುಖಪುಟ ನೋಡಿ ತೀರ್ಮಾನಕ್ಕೆ ಬರಬೇಡಿ, ಹಿಂದೂಯೇತರ ಸ್ನೇಹಿತರು ಕೂಡ ಇದಕ್ಕೆ ಉತ್ತರ ಹೇಳುತ್ತಾರೆ ಎಂದು ಮತ್ತೊಬ್ಬರು ಹೇಳುತ್ತಾರೆ.

ಮತ್ತೊಬ್ಬರು ಮೆದುಳಿಲ್ಲದ ಬ್ಯೂಟಿ, ಕೆಲವರು ಆಲಿಯಾ ಭಟ್ ಗೆ ಹೋಲಿಸಿದ್ದಾರೆ. ಆಲಿಯಾ ಭಟ್ ಇತ್ತೀಚೆಗೆ ಚಾಟ್ ಶೋದಲ್ಲಿ ಭಾಗಿಯಾಗಿದ್ದು ಅವರು ಕೂಡ ಅಸಂಬದ್ದ ಹೇಳಿಕೆ ನೀಡಿದ್ದರು. ಇನ್ನೊಬ್ಬರು ಸೋನಾಕ್ಷಿ ಸಿನ್ಹಾ ಕುಟುಂಬದ ಬಗ್ಗೆ ಹೇಳಿ ಹೀಯಾಳಿಸಿದ್ದಾರೆ. ತಂದೆಯ ಹೆಸರು ಶತ್ರುಘ್ನ ಸಿನ್ಹಾ, ಸೋದರರು ಲವ, ಕುಶ ಮತ್ತು ಅವರ ಮನೆಯ ಹೆಸರು ರಾಮಾಯಣ, ಹೀಗಿದ್ದರೂ ಸಂಜೀವಿನಿ ತಂದಿದ್ದು ಯಾರಿಗೆ ಎಂದು ಗೊತ್ತಿಲ್ಲ ಎಂದಿದ್ದಾರೆ.

ಇದಕ್ಕೆ ಇಂದು ಟ್ವೀಟ್ ನಲ್ಲಿ ಖಾರವಾಗಿ ಉತ್ತರಿಸಿರುವ ಸೋನಾಕ್ಷಿ ಸಿನ್ಹಾ, ಹೌದು ನನಗೆ ಪೈಥಗೋರಸ್ ಪ್ರಮೇಯಾ, ಮರ್ಚೆಂಟ್ ಆಫ್ ವೆನಿಸ್, ಪೀರಿಯಾಡಿಕ್ ಟೇಬಲ್, ಕ್ರೊನಾಲಜಿ, ಮೊಘಲ್ ದೊರೆಗಳ ಬಗ್ಗೆ ಯಾವುದು ಗೊತ್ತಿಲ್ಲ. ನಿಮಗೆ ಮಾಡಲು ಬೇರೆ ಕೆಲಸ ಇಲ್ಲದಿದ್ದರೆ, ನಿಮ್ಮ ಬಳಿ ಸಾಕಷ್ಟು ಸಮಯ ಇದ್ದರೆ ಮೀಮ್ಸ್ ಮಾಡಿ ಹಾಕಿ, ನನಗೆ ಮೀಮ್ಸ್ ಓದುವುದೆಂದರೆ ಇಷ್ಟ ಎಂದು ಹಾಕಿದ್ದಾರೆ. 

 

Stay up to date on all the latest ಬಾಲಿವುಡ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp