ಮುಂಬೈ: ಲಾಕ್ ಡೌನ್ ಮಧ್ಯೆ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅಂತ್ಯಕ್ರಿಯೆ ದಕ್ಷಿಣ ಮುಂಬೈನ ಚಂದನ್ ವಾಡಿ ಸ್ಮಶಾನದಲ್ಲಿ ನಡೆಯಿತು. ರಿಷಿ ಕಪೂರ್ ಅವರ ಮಗ ರಣಬೀರ್ ಕಪೂರ್, ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.
ರಿಷಿ ಕಪೂರ್ ಪತ್ನಿ ನೀತೂ ಸಿಂಗ್ ಕಪೂರ್, ಪುತ್ರ ರಣಬೀರ್ ಕಪೂರ್, ಸಹೋದರ ರಣಧೀರ್ ಕಪೂರ್, ಕರಿನಾ ಕಪೂರ್, ಸೈಫ್ ಅಲಿಖಾನ್, ಅನಿಲ್ ಅಂಬಾನಿ, ಅಯಾನ್ ಮುಖರ್ಜಿ, ಅಲಿಯಾ ಭಟ್, ಅಭಿಷೇಕ್ ಬಚ್ಚನ್ ಮತ್ತಿತರ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಮುಂಬೈ ಪೊಲೀಸರು ಮೊದಲು ರಿಷಿ ಕಪೂರ್ ಪಾರ್ಥಿವ ಶರೀರವನ್ನು ನೇರವಾಗಿ ಚಿತಾಗಾರಕ್ಕೆ ಸಾಗಿಸುವಂತೆ ಸಲಹೆ ನೀಡಿದರು. ಆದರೆ, ಕುಟುಂಬ ಸದಸ್ಯರು ರಿಷಿ ನಿವಾಸಕ್ಕೆ ಕೊಂಡೊಯ್ದ ನಂತರವೇ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ಸಾಗಿಸಿದರು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ಚಿತ್ರರಂಗದ ಮೇರು ತಾರೆ ರಿಷಿ ಕಪೂರ್ ಹೆಚ್ ಎನ್ ರಿಯಲನ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದರು.
Advertisement