ಕೋವಿಡ್-19: ಲತಾ ಮಂಗೇಶ್ಕರ್ ವಾಸವಾಗಿರುವ ಕಟ್ಟಡ  ಸೀಲ್ ಡೌನ್ 

ಕೊರೋನಾವೈರಸ್ ಸಾಂಕ್ರಾಮಿಕ ಕಾಯಿಲೆ ನಡುವೆ ಬೃಹನ್ ಮುಂಬೈ ಮುನ್ಸಿಪಾಲ್ ಕಾರ್ಪೂರೇಷನ್ ನಿಂದ ಲಿಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ವಾಸಿಸುತ್ತಿರುವ ಕಟ್ಟಡವನ್ನು  ಸೀಲ್ ಡೌನ್ ಮಾಡಲಾಗಿದೆ.
ಗಾಯಕಿ ಲತಾ ಮಂಗೇಶ್ಕರ್
ಗಾಯಕಿ ಲತಾ ಮಂಗೇಶ್ಕರ್

ಮುಂಬೈ: ಕೊರೋನಾವೈರಸ್ ಸಾಂಕ್ರಾಮಿಕ ಕಾಯಿಲೆ ನಡುವೆ ಬೃಹನ್ ಮುಂಬೈ ಮುನ್ಸಿಪಾಲ್ ಕಾರ್ಪೂರೇಷನ್ ನಿಂದ ಲಿಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ವಾಸಿಸುತ್ತಿರುವ ಕಟ್ಟಡವನ್ನು  ಸೀಲ್ ಡೌನ್ ಮಾಡಲಾಗಿದೆ. 90 ವರ್ಷದ ಲತಾ ಮಂಗೇಶ್ಕರ್, ದಕ್ಷಿಣ ಮುಂಬೈಯ ಪೆಡ್ಡರ್ ರಸ್ತೆಯಲ್ಲಿರುವ ಪ್ರಭುಕುಂಜ್ ಕಟ್ಟಡದಲ್ಲಿ ವಾಸವಾಗಿದ್ದಾರೆ.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅನೇಕ ಹಿರಿಯ ನಾಗರಿಕರು ವಾಸಿಸುತ್ತಿದ್ದರಿಂದ ಕಟ್ಟಡವನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಲತಾ ಮಂಗೇಶ್ಕರ್ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.

ಈ ಕಟ್ಟಡಲ್ಲಿ ವಾಸಿಸುತ್ತಿರುವ ಕೆಲವರಿಗೆ ಕೋವಿಡ್-19 ಪಾಸಿಟಿವ್ ಬಂದಿದೆ ಎಂಬ ವರದಿಗಳು ಕೇಳಿಬಂದಿತ್ತು. ಆದರೆ, ಇಂತಹ ವರದಿಗಳನ್ನು ತಳ್ಳಿಹಾಕಿರುವ ಲತಾ ಮಂಗೇಶ್ಕರ್ ಕುಟುಂಬ, ಎಲ್ಲಾ  ಸದಸ್ಯರು ವಿಶೇಷವಾಗಿ ಹಿರಿಯ ನಾಗರಿಕರು ಸುರಕ್ಷಿತವಾಗಿ ಇದ್ದೇವೆ. ದೇವರ ಆಶೀರ್ವಾದ ಹಾಗೂ ಅನೇಕರ ಹಾರೈಕೆಯಿಂದ ಆರೋಗ್ಯದಿಂದ ಇರುವುದಾಗಿ ತಿಳಿಸಿದೆ.

ಶನಿವಾರ ಮಹಾರಾಷ್ಟ್ರದಲ್ಲಿ  ದಾಖಲೆಯ 16, 867 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟಾರೇ ಸೋಂಕಿತರ ಸಂಖ್ಯೆ 7,64,281ಕ್ಕೆ ಏರಿಕೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com