ಮಾಜಿ ಪ್ರಿಯಕರ ಹಾರ್ದಿಕ್ ಪಾಂಡ್ಯ ಎಂಗೇಜ್ ಮೆಂಟ್ ಬಗ್ಗೆ ಉರ್ವಶಿ ರೌಟೇಲಾ ಏನಂತಾರೆ?ಗೊತ್ತಾ
ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚಿಗೆ ಸರ್ಬಿಯನ್ ನಟಿ - ಡ್ಯಾನ್ಸರ್ ನಟಶಾ ಸ್ಟಾ ಕೊವಿಕ್ ಅವರೊಂದಿಗೆ ಎಂಗೆಂಜ್ ಮೆಂಟ್ ಮಾಡಿಕೊಳ್ಳುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದರು.
ಬುಧವಾರದಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ, ನಟಿ ಉರ್ವಶಿ ರೌಟೇಲಾ ಮಾಡಿರುವ ಟ್ವೀಟ್ ಎಲ್ಲರ ಕಣ್ಣನ್ನು ಸೆಳೆದಿದೆ.
ಎಂಗೇಜ್ ಮೆಂಟ್ ಶುಭಾಶಯ ಕೋರಿರುವ ಉರ್ವಶಿ, ನಿಮ್ಮ ಸಂಬಂಧ ಯಾವಾಗಲೂ ಪ್ರೀತಿ ಹಾಗೂ ಸುಖಕರವಾಗಿರಲಿ. ಅದ್ಬುತ ಜೀವನ ನಿಮ್ಮದಾಗಲಿ, ಪ್ರೀತಿ ಅನಂತವಾಗಿರಲಿ ಎಂದು ಉರ್ವಶಿ ಹಾರ್ದಿಕ್ ಪಾಂಡ್ಯ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದಕ್ಕೂ ಮುನ್ನ ಉರ್ವಶಿ ಮತ್ತು ಹಾರ್ದಿಕ್ ಪಾಂಡ್ಯ ಡೆಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತಿತ್ತು. ನಟಶಾ ಜೊತೆಗೆ ಎಂಗೇಜ್ ಮೆಂಟ್ ಆಗಿರುವ ವಿಚಾರವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಾರ್ದಿಕ್ ಪಾಂಡ್ಯ ತಿಳಿಸಿದ್ದರು.
ನಟಶಾ ಕೂಡಾ ಕೆಲವೊಂದು ಚಿತ್ರಗಳು ಹಾಗೂ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ಹಿಂದೆ ನಟಶಾ ಜೊತೆಗೆ ಡೆಟಿಂಗ್ ನಲ್ಲಿದ್ದ ಟಿವಿ ಕಲಾವಿದ ಅಲಿ ಗೊನಿ ಕೂಡಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ