
ಮುಂಬೈ: ಆದಿತ್ಯ ರಾಯ್ ಕಪೂರ್ ಮತ್ತು ದಿಶಾ ಪಟಾನಿ ಅಭಿನಯಿಸಿರುವ ಮಲಾಂಗ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.
ಮೈ ಸೂಸುವ ಸುಂದರ ಸೂರ್ಯ ಕಿರಣಗಳ ನಡುವೆ ಆದಿತ್ಯ ರಾಯ್ ಬೆನ್ನೇರಿ ಕುಳಿತ ತುಂಡುಗೆಯ ದಿಶಾ ಪಟಾನಿ, ಪರಸ್ಪರ ಚುಂಬಿಸುತ್ತಿರುವುದು ಪೋಸ್ಟರ್ ನಲ್ಲಿ ಕಂಡುಬಂದಿದೆ.
ಕುತೂಹಲಕಾರಿ,ಯೌವ್ವನ, ಹುಚ್ಚು, ಪ್ರೀತಿ, ಅದ್ದಕ್ಕಿಂತಲೂ ಹೆಚ್ಚಿನ ಎಲ್ಲಾ ಅಂಶವೂ ಇದರಲ್ಲಿ ಮೇಳೈಸಿದೆ ಎಂದು ನಿರ್ದೇಶಕ ಮೋಹಿತ್ ಸೂರಿ ಟ್ವೀಟ್ ಮಾಡಿದ್ದಾರೆ. ಪ್ರೇಕ್ಷಕರು ಈ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೋ ಎಂಬುದನ್ನು ಕಾದು ನೋಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಮಾರಿಷಷ್, ಗೋವಾ ಮತ್ತು ಮುಂಬೈಯಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಟಿ- ಸಿರೀಸ್ ನಿರ್ಮಾಣದ ಈ ಚಿತ್ರ ಫೆಬ್ರವರಿ 7 ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.
Advertisement