ಸೋನು ಸೂದ್ ನಂತರ ಉತ್ತರ ಪ್ರದೇಶ ವಲಸಿಗರಿಗಾಗಿ 10 ಬಸ್ ಗಳ ವ್ಯವಸ್ಥೆ ಮಾಡಿದ ಅಮಿತಾಬ್! 

ಸೋನು ಸೂದ್ ನಂತರ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದಿದ್ದಾರೆ. ಅವರು ಪ್ರಾಯೋಜಿಸಿರುವ 10 ಬಸ್‍ಗಳು 200 ಕ್ಕೂ ಹೆಚ್ಚು ವಲಸಿಗರನ್ನು ಹೊತ್ತು ಶುಕ್ರವಾರ ಮುಂಬೈನಿಂದ ಉತ್ತರ ಪ್ರದೇಶಕ್ಕೆ ತೆರಳಿವೆ.
ಸೋನು ಸೂದ್, ಅಮಿತಾಬ್ ಬಚ್ಚನ್
ಸೋನು ಸೂದ್, ಅಮಿತಾಬ್ ಬಚ್ಚನ್
Updated on

ಮುಂಬೈ: ಸೋನು ಸೂದ್ ನಂತರ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದಿದ್ದಾರೆ.  ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಅನ್ನ, ನೀರು ಇಲ್ಲದೆ ಮುಂಬೈನಲ್ಲಿದ್ದ ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಬಸ್ ವ್ಯವಸ್ಥೆ ಮಾಡುವ ಮೂಲಕ ಅವರವರ ಊರುಗಳಿಗೆ ಕಳುಹಿಸಿದ್ದಾರೆ.

ಅಮಿತಾಬ್ ಬಚ್ಚನ್  ಪ್ರಾಯೋಜಿಸಿರುವ 10 ಬಸ್‍ಗಳು 200 ಕ್ಕೂ ಹೆಚ್ಚು ವಲಸಿಗರನ್ನು ಹೊತ್ತು ಶುಕ್ರವಾರ ಮುಂಬೈಯಿಂದ ಉತ್ತರ ಪ್ರದೇಶಕ್ಕೆ ತೆರಳಿವೆ.

ಮುಂಬೈಯಿಂದ ಒಂದು ಬಸ್ ಲಕ್ನೋಗೆ, ತಲಾ 2 ಬಸ್‍ಗಳು ಗೋರಖ್‌ಪುರ ಮತ್ತು ಭಾದೊಯ್‌ಗೆ ಹಾಗೂ ಐದು ಬಸ್‍ಗಳು ಅಲಹಾಬಾದ್‌ಗೆ ತೆರಳಿವೆ. ಈ ಸ್ಥಳಗಳಿಂದ ವಲಸಿಗರು ತಮ್ಮ ಸ್ವಂತ ಗ್ರಾಮಗಳಿಗೆ ತೆರಳಲಿದ್ದಾರೆ.

ಉತ್ತರಪ್ರದೇಶದ ವಿವಿಧ ಸ್ಥಳಗಳಿಗೆ ಶುಕ್ರವಾರ ಮಧ್ಯಾಹ್ನ ಮಹಿಳೆಯರು ಮತ್ತು 43 ಮಕ್ಕಳು ಸೇರಿದಂತೆ ಸುಮಾರು 225 ವಲಸಿಗರನ್ನು ಹೊತ್ತ 10 ಬಸ್‌ಗಳಿಗೆ ಹಸಿರು ನಿಶಾನೆ ತೋರಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com