'ಗಲ್ಲಿ ಬಾಯ್' ಖ್ಯಾತಿಯ ಬಾಲಿವುಡ್ ನಟ ವಿಜಯ್ ರಾಜ್ ಅರೆಸ್ಟ್

ಬಾಲಿವುಡ್ ನಟರ ವಿರುದ್ಧ ಇತ್ತೀಚಿನ ದಿನಗಳಲ್ಲಿ ಆರೋಪ ಕೇಳಿಬರುವುದು ಹೆಚ್ಚುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ನಟ ನಟಿಯರ ಮೇಲೆ ಸರಣಿ ಆರೋಪಗಳು ಕೇಳಿ ಬಂದಿದೆ.
ವಿಜಯ್ ರಾಜ್
ವಿಜಯ್ ರಾಜ್
Updated on

ಮುಂಬೈ: ಬಾಲಿವುಡ್ ನಟರ ವಿರುದ್ಧ ಇತ್ತೀಚಿನ ದಿನಗಳಲ್ಲಿ ಆರೋಪ ಕೇಳಿಬರುವುದು ಹೆಚ್ಚುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ನಟ ನಟಿಯರ ಮೇಲೆ ಸರಣಿ ಆರೋಪಗಳು ಕೇಳಿ ಬಂದಿದೆ. ಈ ಮುನ್ನ  'ಮಿ ಟೂ' ಮೂಲಕ ಹಲವಾರು ನಟಿಯರು ಬಾಲಿವುಡ್‌ನ ಪ್ರಖ್ಯಾತ ನಟರ ವಿರುದ್ಧ ಶೋಷಣೆ ಮತ್ತು ಕಿರುಕುಳ ಆರೋಪ ಮಾಡಿದ್ದರು.ಇದೀಗ ಇನ್ನೊಬ್ಬ ಬಾಲಿವುಡ್ ನಟ ವಿಜಯ್ ರಾಜ್ ಮೇಲೆಯೂ ಅಂತಹುದೇ ಕಿರುಕುಳ ಆರೋಪ ಕೇಳಿ ಬಂದಿದ್ದು ಪೋಲೀಸರು ಆತನನ್ನು ಬಂಧಿಸಿದ್ದಾರೆ.

"ಗಲ್ಲಿ ಬಾಯ್" ಚಿತ್ರದಲ್ಲಿ ಅಭಿನಯಿಸಿದ್ದ ವಿಜಯ್ ರಾಜ್ ಪ್ರಸ್ತುತ, 'ಶೆರಾನಿ' ಚಿತ್ರದ ಚಿತ್ರೀಕರಣದಲ್ಲಿದ್ದು ವಿದರ್ಭ ಪ್ರಾಂತ್ಯದಲಿ ಚಿತ್ರೀಕರಣ ನಡೆಯುತ್ತಿದೆ. 

ಏತನ್ಮಧ್ಯೆ, ಚಿತ್ರದ ಸಿಬ್ಬಂದಿಗಳಲ್ಲಿ ಒಬ್ಬರಾದ ಮಹಿಳೆ ನಿನ್ನೆ ರಾತ್ರಿ ವಿಜಯ್ ರಾಜ್ ತಮಗೆ ಕಿರುಕುಳ ನಿಡಿದ್ದಾರೆಂದು ಆರೋಪಿಸಿದ್ದಾರೆ. ಸಂತ್ರಸ್ತೆ ಈ ಬಗ್ಗೆ ಗೊಂಡಿಯಾದ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 'ಶೆರಾನಿ' ವಿದ್ಯಾ ಬಾಲನ್ ಅಭಿನಯದ ಚಿತ್ರವಾಗಿದ್ದು ಈ ಚಿತ್ರದ ಶೂಟಿಂಗ್ ಮಧ್ಯಪ್ರದೇಶದ ಬಾಲಘಾಟ್ ನಲ್ಲಿ ನಡೆಯುತ್ತಿದೆ. ಇಡೀ ಚಿತ್ರತಂಡದ ಸದಸ್ಯರು  ಗೊಂಡಿಯಾದ ಗೇಟ್​ವೇ ಹೋಟೆಲ್​​ನಲ್ಲಿ ತಂಗಿದ್ದರು ಎನ್ನಲಾಗಿದೆ.

ದೂರು ದಾಖಲಿಸಿಕೊಂಡ ಪೋಲೀಸರು  ವಿಜಯ್ ರಾಜ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ಯಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com