ತಮ್ಮನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಲು ಮಹಾ ಗೃಹ ಸಚಿವರಿಗೆ ಕಂಗನಾ ಸವಾಲು! 

ಡ್ರಗ್ ಜಾಲದಲ್ಲಿ ರಿಯಾ ಚಕ್ರವರ್ತಿಯ ಬಂಧನದ ಬೆನ್ನಲ್ಲೇ ಕಂಗಾನಾ ಅವರಿಗೆ ಡ್ರಗ್ಸ್ ಜಾಲದ ನಂಟಿದೆ ಎಂದು ಆರೋಪಿಸಿದ್ದ ಮಹಾರಾಷ್ಟ್ರ ಗೃಹ ಸಚಿವರಿಗೆ ಕಂಗನಾ ನೇರಾ ನೇರಾ ಸವಾಲು ಹಾಕಿದ್ದಾರೆ. 
ಕಂಗನಾ ರಣಾವತ್
ಕಂಗನಾ ರಣಾವತ್
Updated on

ಡ್ರಗ್ ಜಾಲದಲ್ಲಿ ರಿಯಾ ಚಕ್ರವರ್ತಿಯ ಬಂಧನದ ಬೆನ್ನಲ್ಲೇ ಕಂಗಾನಾ ಅವರಿಗೆ ಡ್ರಗ್ಸ್ ಜಾಲದ ನಂಟಿದೆ ಎಂದು ಆರೋಪಿಸಿದ್ದ ಮಹಾರಾಷ್ಟ್ರ ಗೃಹ ಸಚಿವರಿಗೆ ಕಂಗನಾ ನೇರಾ ನೇರಾ ಸವಾಲು ಹಾಕಿದ್ದಾರೆ. 

ಕಂಗನಾ ಅವರ ಸಂದರ್ಶನದ ಭಾಗವನ್ನು ಉಲ್ಲೇಖಿಸಿದ್ದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರು " ಕಂಗನಾ ತಾವು ಡ್ರಗ್ಸ್ ತೆಗೆದುಕೊಳ್ಳುವುದನ್ನು ಒಪ್ಪಿಕೊಂಡಿದ್ದರು ಜೊತೆಗೆ  ಅಧ್ಯಯಾನ್ ಸುಮನ್ ಎಂಬಾತನಿಗೂ ಡ್ರಗ್ಸ್ ತೆಗೆದುಕೊಳ್ಳುವುದಕ್ಕೆ ಒತ್ತಾಯ ಮಾಡಿದ್ದನ್ನು ಹೇಳಿದ್ದರು ಎಂದು ಮಹಾ ವಿಧಾನಸಭೆಯಲ್ಲಿ ಆರೋಪಿಸಿದ್ದರು. ಅಷ್ಟೇ ಅಲ್ಲದೇ ಮಹಾರಾಷ್ಟ್ರ ಪೊಲೀಸರು ಈ ಬಗ್ಗೆ ಗಮನ ಹರಿಸುತ್ತಾರೆ ಎಂದೂ ಹೇಳಿದ್ದರು. 

ಮಹಾರಾಷ್ಟ್ರ ಗೃಹ ಸಚಿವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕಂಗನಾ, ನನ್ನನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಿ,  ನನ್ನ ಕರೆ ದಾಖಲೆಗಳನ್ನು ತನಿಖೆ ಮಾಡಿ, ಅದರಲ್ಲಿ ಡ್ರಗ್ಸ್ ಗೆ ಸಂಬಂಧಿಸಿದ ಯಾವುದೇ ಮಾಹಿತಿ ದೊರೆತರೂ ನನ್ನ ತಪ್ಪನ್ನು ಒಪ್ಪಿಕೊಂಡು ಶಾಶ್ವತವಾಗಿ ಮುಂಬೈ ತೊರೆಯುತ್ತೇನೆ ಎಂದು ಕಂಗನಾ ಸವಾಲು ಹಾಕಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com