ದುರ್ಗಿ ಅವತಾರದಲ್ಲಿ ಕಾಣಿಸಿಕೊಂಡ ನಟಿ: ಸಂಸದೆ ನುಸ್ರತ್ ಜಹಾನ್ ಗೆ ಜೀವ ಬೆದರಿಕೆ!

ದುರ್ಗಿ ಅವತಾರದಲ್ಲಿ ಕಾಣಿಸಿಕೊಂಡಿರುವ ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ ಅವರಿಗೆ ಕಿಡಿಗೇಡಿಗಳು ಜೀವ ಬೆದರಿಕೆ ಹಾಕುತ್ತಿದ್ದಾರೆ. 
ನುಸ್ರತ್ ಜಹಾನ್
ನುಸ್ರತ್ ಜಹಾನ್
Updated on

ಕೋಲ್ಕತ್ತಾ: ದುರ್ಗಿ ಅವತಾರದಲ್ಲಿ ಕಾಣಿಸಿಕೊಂಡಿರುವ ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ ಅವರಿಗೆ ಕಿಡಿಗೇಡಿಗಳು ಜೀವ ಬೆದರಿಕೆ ಹಾಕುತ್ತಿದ್ದಾರೆ. 

ನುಸ್ರತ್ ಜಹಾನ್ ದುರ್ಗಿ ಅವತಾರದಲ್ಲಿ ಕಾಣಿಸಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿದ ಹಲವರು ನಟಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. 

 
 
 
 
 
 
 
 
 
 
 
 
 

Shubho mahalaya... সকল কে.

A post shared by Nusrat (@nusratchirps) on

ಬಂಗಾಳದ ನಟಿ ನುಸ್ರತ್ ಜಹಾನ್ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದು ಹಿಂದೂ ವ್ಯಕ್ತಿಯನ್ನು ವಿವಾಹವಾಗಿದ್ದರು. ಹೀಗಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಹಿಂದೂ ಹೆಸರನ್ನು ಇಟ್ಟುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿ ದುರ್ಗಿ ಆರಾಧ್ಯ ದೈವವಾಗಿದೆ. ಇನ್ನು ಮಹಾಲಯ ಅಮವಾಸ್ಯೆ ಹಿನ್ನೆಲೆ ನುಸ್ರತ್ ಅವರು ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದರು. ಇದಕ್ಕೆ ಹಲವರು ಕಮೆಂಟ್ ಮಾಡಿದ್ದು ನಿಮಗೆ ಅಲ್ಲಾ ಅಂದರೆ ಭಯವಿಲ್ಲವೆ. ನಿಮ್ಮ ಸಾವಿನ ಸಮಯ ಹತ್ತಿರ ಬಂದಿದೆ. ನಿಮ್ಮ ದೇಹವನ್ನು ಮುಚ್ಚಿಡಲು ಆಗುವುದಿಲ್ಲವೇ ಎಂದು ಕಮೆಂಟ್ ಮಾಡಿದ್ದಾರೆ. 

ಮತ್ತೊಬ್ಬ ನಿಮ್ಮ ಹೆಸರನ್ನು ನಸು ದಾಸ್/ಸೇನ್/ಘೋಷ್ ಎಂಬ ಹಿಂದೂ ಹೆಸರಿಗೆ ಬದಲಿಸಿಕೊಳ್ಳಿ ಕಮೆಂಟ್ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com