ಲಾಕ್ ಡೌನ್: ಸಲ್ಮಾನ್ ಖಾನ್ ಏಲ್ಲಿದ್ದಾರೆ, ಏನು ಮಾಡ್ತಿದ್ದಾರೆ ಗೊತ್ತಾ?
ಲಾಕ್ ಡೌನ್ ವೇಳೆಯಲ್ಲಿ ತನ್ನ ಫಾರ್ಮ್ ಹೌಸ್ ಗೆ ತಾತ್ಕಾಲಿಕವಾಗಿ ತೆರಳಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಅಲ್ಲಿ ಅತ್ಯಮೂಲ್ಯ ಸಮಯವನ್ನು ಕಳೆಯುತ್ತಾ ಎಂಜಾಯ್ ಮಾಡುತ್ತಿದ್ದಾರೆ.
Published: 11th April 2020 01:59 PM | Last Updated: 11th April 2020 03:02 PM | A+A A-

ಸಲ್ಮಾನ್ ಖಾನ್
ಮುಂಬೈ: ಲಾಕ್ ಡೌನ್ ವೇಳೆಯಲ್ಲಿ ತನ್ನ ಫಾರ್ಮ್ ಹೌಸ್ ಗೆ ತಾತ್ಕಾಲಿಕವಾಗಿ ತೆರಳಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಅಲ್ಲಿ ಅತ್ಯಮೂಲ್ಯ ಸಮಯವನ್ನು ಕಳೆಯುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ಫಾರ್ಮ್ ಹೌಸ್ ನಲ್ಲಿ ಕುದುರೆ ಮೇಲೆ ಕುಳಿತಿರುವ ವಿಡಿಯೋವೊಂದನ್ನು ಸಲ್ಮಾನ್ ಖಾನ್ ಇನ್ಸಾಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ.
ಸರಳ ಗೆಟಪ್ ನಲ್ಲಿರುವ ಸಲ್ಮಾನ್ ಖಾನ್, ತನ್ನ ತಲೆ ಮೇಲೆ ಹುಲ್ಲನ್ನು ಹಾಕಿ ಕುದುರೆಗೆ ತಿನ್ನಿಸಿದ್ದಾರೆ. ನಂತರ ಕುದುರೆ ಮೇಲೆ ಸವಾರಿ ಮಾಡಿದ್ದಾರೆ.
ಇದಕ್ಕೂ ಮುಂಚೆ ಕುದುರೆಯೊಂದಿಗೆ ಉಪಹಾರ ಸೇವನೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು.