ನಟ ಇರ್ಫಾನ್ ಸಾವಿಗೆ ಬಾಲಿವುಡ್ ಕಂಬಿನಿ

ಪ್ರಸಿದ್ಧ ನಟ ಇರ್ಫಾನ್ ಖಾನ್ ಅವರ ನಿಧನಕ್ಕೆ ಬಾಲಿವುಡ್ ನಟ ನಟಿಯರು ಸಂತಾಪ ಸೂಚಿಸಿದ್ದಾರೆ
ಇರ್ಫಾನ್ ಖಾನ್
ಇರ್ಫಾನ್ ಖಾನ್
Updated on

ಪ್ರಸಿದ್ಧ ನಟ ಇರ್ಫಾನ್ ಖಾನ್ ಅವರ ನಿಧನಕ್ಕೆ ಬಾಲಿವುಡ್ ನಟ ನಟಿಯರು ಸಂತಾಪ ಸೂಚಿಸಿದ್ದಾರೆ

ಇರ್ಫಾನ್ ಖಾನ್ ದೀರ್ಘಕಾಲದವರೆಗೆ ಕ್ಯಾನ್ಸರ್ ರೋಗದೊಂದಿಗೆ ಹೋರಾಡುತ್ತಿದ್ದರು. ಮುಂಬಯಿಯ ಕೋಕಿಲಾಬೆನ್ ಧಿರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಅವರು ಈ ಕಾಯಿಲೆಯೊಂದಿಗೆ ಹೋರಾಡಿ ಕೊನೆಯುಸಿರುಳೆದಿದ್ದಾರೆ. 

ಸ್ವರ ಸಾಮ್ರಾಟೆ ಲತಾ ಮಂಗೇಶ್ಕರ್ ಅವರು ಟ್ವೀಟ್ ಮಾಡಿದ್ದು, "ಇರ್ಫಾನ್ ಖಾನ್ ಅವರ ನಿಧನದ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಗಿದೆ, ಅವರು ಬಹಳ ಸದ್ಗುಣಶೀಲರು. ನಾನು ಅವರ ಆತ್ಮಕ್ಕೆ ಗೌರವ ಸಲ್ಲಿಸುತ್ತೇನೆ" ಎಂದು ಬರೆದಿದ್ದಾರೆ. 

ಇರ್ಫಾನ್ ಖಾನ್ ಅವರ ನಿಧನಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಒಬ್ಬ ಅದ್ಭುತ ಸಹಕಲಾವಿದ, ಅದ್ಭುತ ಪ್ರತಿಭೆ, ಸಿನೆಮಾ ಜಗತ್ತಿಗೆ ಭಾರಿ ಕೊಡುಗೆ ನೀಡಿ, ಈ ಪ್ರಪಂಚದಿಂದ ಬೇಗನೆ ಹೊರಟು ಹೋದರು" ಎಂದಿದ್ದಾರೆ. 

ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಇರ್ಫಾನ್ ಖಾನ್ ಅವರ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ನಟ ಅನುಪಮ್ ಖೇರ್ ಸಹ ಟ್ವೀಟ್ ಮಾಡಿದ್ದು, "ಆತ್ಮೀಯ ಸ್ನೇಹಿತ ಮತ್ತು ಅತ್ಯುತ್ತಮ ನಟ ಮತ್ತು ಅದ್ಭುತ ವ್ಯಕ್ತಿಯಾದ ಇರ್ಫಾನ್ ಖಾನ್ ಸಾವಿನ ಸುದ್ದಿ ಹೃದಯ ವಿದ್ರಾವಕ ಮತ್ತು ದುಃಖಕರವಾಗಿದೆ” ಎಂದು ಬರೆದಿದ್ದಾರೆ. 

ಅಕ್ಷಯ್ ಕುಮಾರ್, "ನಮ್ಮ ಕಾಲದ ಅತ್ಯುತ್ತಮ ನಟರಲ್ಲಿ ಒಬ್ಬರಾದ ಇರ್ಫಾನ್ ಖಾನ್ ಅವರ ನಿಧನದ ಸುದ್ದಿ ಕೇಳಲು ಬೇಸರವಾಗಿದೆ. ಈ ಕಷ್ಟದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ಬಲವನ್ನು ನೀಡಲಿ” ಎಂದಿದ್ದಾರೆ. 

ಬಾಲಿವುಡ್ ನಟಿ ರವೀನಾ ಟಂಡನ್, ಪರಿಣಿತಿ ಚೋಪ್ರಾ, ಅನುಷ್ಕಾ ಶರ್ಮಾ, ನಟ ಅಜಯ್ ದೇವಗನ್, ನಟ ಫರ್ಹಾನ್ ಅಖ್ತರ್ ನಿರ್ಮಾಪಕ ಕರಣ್ ಜೋಹರ್ ಸಹ ಇರ್ಫಾನ್ ರನ್ನು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com