ಖ್ಯಾತ ಬಾಲಿವುಡ್ ಗೀತರಚನೆಕಾರ ಮತ್ತು ಉರ್ದು ಕವಿ ರಾಹತ್ ಇಂದೋರಿ  ಕೋವಿಡ್ -19ನಿಂದ ನಿಧನ

ಕೋವಿಡ್ -19 ಪಾಸಿಟಿವ್ ವರದಿ ಬಂದು ಕೆಲವೇ ಗಂಟೆಗಳ ನಂತರ, 70 ವರ್ಷದ ಬಾಲಿವುಡ್ ಗೀತರಚನೆಕಾರ ಮತ್ತು ಪ್ರಸಿದ್ದ ಉರ್ದು ಕವಿ ಡಾ.ರಾಹತ್ ಇಂದೋರಿ ಮಂಗಳವಾರ ಇಂದೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ರಾಹತ್ ಇಂದೋರಿ
ರಾಹತ್ ಇಂದೋರಿ

ಕೋವಿಡ್ -19 ಪಾಸಿಟಿವ್ ವರದಿ ಬಂದು ಕೆಲವೇ ಗಂಟೆಗಳ ನಂತರ, 70 ವರ್ಷದ ಬಾಲಿವುಡ್ ಗೀತರಚನೆಕಾರ ಮತ್ತು ಪ್ರಸಿದ್ದ ಉರ್ದು ಕವಿ ಡಾ.ರಾಹತ್ ಇಂದೋರಿ ಮಂಗಳವಾರ ಇಂದೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇಂದೋರ್‌ನ ಶ್ರೀ ಅರಬಿಂದೋ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಸ್‌ಐಎಂಎಸ್)  ನಲ್ಲಿ  ಸಂಜೆ 4.15 ರಿಂದ ಸಂಜೆ 4.30 ರ ನಡುವೆ ಕವಿ ಇಂದೋರಿ ಅವರಿಗೆ ಮೂರು ಬಾರಿ  ಹೃದಯಾಘಾತವಾಗಿದೆ. ವೈದ್ಯರ ಪ್ರಯತ್ನಗಳ ಹೊರತಾಗಿಯೂ, ಅವರನ್ನು  ಬದುಕಿಸಿಕೊಳ್ಲಲು ಆಗಲಿಲ್ಲ ಎಂದು ಮೂಲಗಳು ಹೇಳಿದೆ,

ಇಂದೋರಿಯವರನ್ನು ಸೋಮವಾರ ರಾತ್ರಿ ಮತ್ತೊಂದು ಖಾಸಗಿ ಆಸ್ಪತ್ರೆಯಿಂದ ಕೋವಿಡ್ ಗೆ ಮೀಸಲಾದ ಎಸ್‌ಐಎಂಎಸ್‌ಗೆ ಸ್ಥಳಾಂತರಿಸಲಾಗಿತ್ತು.

ಮಂಗಳವಾರ ಬೆಳಿಗ್ಗೆ ತನ್ನ ಕೊನೆಯ ಟ್ವೀಟ್‌ನಲ್ಲಿ, ಇಂದೋರಿ ತಾವು ಕೋವಿಡ್ ಪಾಸಿಟಿವ್ ವರದಿ ಪಡೆಇದ್ದಾಗಿ ಹೇಳಿದ್ದರು. ಅಲ್ಲದೆ ಮತ್ತು ಮಾರಣಾಂತಿಕ ವೈರಸ್ ವಿರುದ್ಧದ ಹೋರಾಟಕ್ಕೆ ತನಗೆ ಬೆಂಬಲ ನೀಡುವಂತೆ ಅಬೀಮಾನಿಗಳಿಗೆ ಮನವಿ ಮಾಡಿದ್ದರು.

 50 ವರ್ಷಗಳ ಕಾವ್ಯ ಜೀವನ ಪೂರೈಸಿದ್ದ ಇಂದೋರಿ ಮುನ್ನಾಭಾಯ್ ಎಂಬಿಬಿಎಸ್, ಘಾತಕ್, ಇಷ್ಕ್,  ಖದ್ದರ್, ಮೀನಾಕ್ಸಿ ಎಂಬ ಹಿಟ್ ಚಿತ್ರಗಳು ಸೇರಿದಂತೆ ತೆ ಅನೇಕ ಪ್ರಸಿದ್ಧ ಬಾಲಿವುಡ್ ಸಿನಿಮಾಗಳಿಗೆ ಗೀತರಚನೆ ಮಾಡಿದ್ದಾರೆ.

ಎಆರ್ ರೆಹಮಾನ್, ಅನು ಮಲಿಕ್, ಅರಿಜಿತ್ ಸಿಂಗ್, ಮತ್ತು ಅಲ್ಕಾ ಯಾಗ್ನಿಕ್  ಸೇರಿ ಹಲವು ಖ್ಯಾತನಾಮರ ಜತೆ ಇಂದೋರಿ ಕೆಲಸ ಮಾಡಿದ್ದರು,

ಜನವರಿ 1, 1950 ರಂದು ಇಂದೋರ್‌ನಲ್ಲಿ ಜನಿಸಿದ ರಾಹತ್ ಖುರೇಷಿ ಅಕಾ ರಹತ್ ಇಂದೋರಿ ರುತ್, ದೊ ಕದರ್ ಔರ್ ಸಹಿ, ಮೆರೆ ಬಾದ್ ಧೂಪ್ ಬಹುತ್ ಹೈ, ಚಾಂದ್ ಪಾಗಲ್ ಹೈ, ಮೌಜೂದ್ ಮತ್ತು ನಾರಾಜ್ ಇನ್ನೂ ಮೊದಲಾದ ಕವನ ಸಂಕಲನ ಪ್ರಕಟಿಸಿದ್ದಾರೆ. 

ನೂತನ್ ಶಾಲೆಯಲ್ಲಿ ಶಾಲಾ ಶಿಕ್ಷಣ, ಇಂದೋರ್ ನ ಇಸ್ಲಾಮಿಯಾ ಕರಿಮಿಯಾ ಕಾಲೇಜಿನಿಂದ ಪದವಿ, ಮಧ್ಯಪ್ರದೇಶದ ಭೋಜ್ ವಿಶ್ವವಿದ್ಯಾಲಯದಿಂದ ಉರ್ದು ಸಾಹಿತ್ಯದಲ್ಲಿಪಿಎಚ್‌ಡಿ  ವ್ಯಾಸಂಗ ಸಹ ಮಾಡಿದ್ದರು,  ಇಂದೋರಿ ಎರಡು ಬಾರಿ ಕಪಿಲ್ ಶರ್ಮಾ ಅವರ ಜನಪ್ರಿಯ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಅವರ ಉರ್ದು ಕವನಗಳು ಮತ್ತು ಮುಷೈರಾಗಳಿಗೆ ಜಾಗತಿಕವಾಗಿ ಪ್ರಸಿದ್ದಿ ಲಭಿಸಿತ್ತು,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com