'ದಿಲ್ ತೊ ಹ್ಯಾಪಿ ಹೈ ಜಿ' ನಟಿ ಸೆಜಲ್ ಶರ್ಮಾ ಆತ್ಮಹತ್ಯೆಗೆ ಶರಣು 

ಕಿರುತೆರೆ ನಟಿ ಸೆಜಲ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 'ದಿಲ್ ತೊ ಹ್ಯಾಪಿ ಹೈ ಜಿ' ಶೋನಲ್ಲಿ ಸಿಮ್ಮಿ ಖೊಸ್ಲಾ ಪಾತ್ರದಲ್ಲಿ ನಟಿ ಸೆಜಲ್ ಶರ್ಮಾ ಜನಪ್ರಿಯರಾಗಿದ್ದರು.
ಸೆಜಲ್ ಶರ್ಮಾ
ಸೆಜಲ್ ಶರ್ಮಾ

ಮುಂಬೈ: ಕಿರುತೆರೆ ನಟಿ ಸೆಜಲ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 'ದಿಲ್ ತೊ ಹ್ಯಾಪಿ ಹೈ ಜಿ' ಶೋನಲ್ಲಿ ಸಿಮ್ಮಿ ಖೊಸ್ಲಾ ಪಾತ್ರದಲ್ಲಿ ನಟಿ ಸೆಜಲ್ ಶರ್ಮಾ ಜನಪ್ರಿಯರಾಗಿದ್ದರು.


20 ದಿನಗಳ ಹಿಂದೆ ಅವರನ್ನು ಭೇಟಿ ಮಾಡಿ ಮಾತನಾಡಿದ್ದೆ. ಕಳೆದ ಭಾನುವಾರ ವಾಟ್ಸಾಪ್ ನಲ್ಲಿ ಕೂಡ ಚಾಟ್ ಮಾಡಿದ್ದೆವು. ನನಗೆ ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ತೀವ್ರ ಆಘಾತವಾಗಿದೆ ಎಂದು ದಿಲ್ ತೊ ಹ್ಯಾಪಿ ಹೈ ಜಿ ಶೋನಲ್ಲಿ ಸೆಜಲ್ ಜೊತೆ ನಟಿಸುತ್ತಿದ್ದ ಸಹ ನಟ ಅರು ಕೆ ವರ್ಮ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.ಈ ಶೋನಲ್ಲಿ ಅರು ಸೆಜಲ್ ಅವರು ಸೋದರನಾಗಿ ನಟಿಸುತ್ತಿದ್ದರು. 


ಇಂದು ಬೆಳಗ್ಗೆ ಸೆಜಲ್ ಕುಟುಂಬದವರಿಗೆ ನಟಿಯ ಆತ್ಮಹತ್ಯೆ ಸುದ್ದಿ ಗೊತ್ತಾಗಿದೆ. ಇಂದು ಬೆಳಗ್ಗೆ ಕುಟುಂಬಸ್ಥರು ನಟಿಯ ಅಂತಿಮ ವಿಧಿವಿಧಾನಗಳಿಗೆ ಉದಯ್ ಪುರ್ ಗೆ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. 


ನಟಿಯ ವೈಯಕ್ತಿಕ ಜೀವನದಲ್ಲಿ ಆದ ಕೆಲ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಉದಯ್ ಪುರದಿಂದ ಮುಂಬೈಗೆ 2017ರಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೊಡ್ಡಿ ಬಂದಿದ್ದ ಸೆಜಲ್ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ವೆಬ್ ಸಿರೀಸ್ ಆಜಾದ್ ಪರಿಂದೆಯಲ್ಲಿ ನಟಿಸಿದ್ದರು.


ನಂತರ ಸ್ಟಾರ್ ಪ್ಲಸ್ ನಲ್ಲಿ ದಿಲ್ ತೊ ಹ್ಯಾಪಿ ಹೈ ಜಿ ಶೋನಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com