ಇಷ್ಟು ವರ್ಷ ನಟಿಸಿದ ಸಿನಿಮಾಗಳಲ್ಲಿ ದೀಪಿಕಾ ಪಡುಕೋಣೆ ಮೆಚ್ಚಿನ ಪಾತ್ರ ಯಾವುದು ಗೊತ್ತೆ?

ಬಾಲಿವುಡ್ ನಟಿ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ತಮಗಿಷ್ಟವಾದ ಪಾತ್ರ ಯಾವುದು ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ತಮ್ಮ ಅಭಿಮಾನಿಗಳ ಜೊತೆಗೆ ನಡೆಸಿದ ಆಸ್ಕ್ ಮಿ ಎನಿಥಿಂಗ್ ಸಂವಾದದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ ದೀಪಿಕಾ .

Published: 16th July 2020 01:25 PM  |   Last Updated: 16th July 2020 01:36 PM   |  A+A-


Deepika padukone

ದೀಪಿಕಾ ಪಡುಕೋಣೆ

Posted By : Shilpa D
Source : IANS

ಮುಂಬಯಿ: ಬಾಲಿವುಡ್ ನಟಿ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ತಮಗಿಷ್ಟವಾದ ಪಾತ್ರ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ತಮ್ಮ ಅಭಿಮಾನಿಗಳ ಜೊತೆಗೆ ನಡೆಸಿದ ಆಸ್ಕ್ ಮಿ ಎನಿಥಿಂಗ್ ಸಂವಾದದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ ದೀಪಿಕಾ .

ಲಾಕ್ ಡೌನ್ ನಂತರ ನಿಮ್ಮ ಲಿಸ್ಟ್ ನಲ್ಲಿರುವ ಮೊದಲ ಕೆಲಸ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿರುವ ದೀಪಿಕಾ ಬೆಂಗಳೂರಿನಲ್ಲಿರುವ ತಮ್ಮ ಪೋಷಕರು ಮತ್ತು ತಂಗಿಯನ್ನು ನೋಡುವುದು ಎಂದಾಗಿದೆ.

ಇಷ್ಟು ದಿನ ನಟಿಸಿದ ಚಿತ್ರಗಳಲ್ಲಿ ನಿಮ್ಮ ಮೆಚ್ಚಿನ ಪಾತ್ರ ಯಾವುದು?ಪಿಕು ಎಂದು ಬರೆದಿದ್ದಾರೆ ದೀಪಿಕಾ

ಯಾವುದೇ ವಿಲಕ್ಷಣ ಪ್ರತಿಭೆ ಹೊಂದಿದ್ದಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ದೀಪಿಕಾ ಇದನ್ನು ನೀವು ನನ್ನ ಪತಿ ಅಥವಾ ನನ್ನ ಸಹೋದರಿ ಬಳಿ ಕೇಳಿ ಎಂದಿದ್ದಾರೆ,  ಊಟದ ವಿಷಯವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವದೀಪಿಕಾ ಅನ್ನ, ರಸ ಹಾಗೂ ಮಾವಿನ ಉಪ್ಪಿನಕಾಯಿ ಇದ್ದರೆ ಸಾಕು ಜೀವನ ಕಳೆಯುತ್ತಾರಂತೆ. 

ಇನ್ನು ದೀಪಿಕಾಗೆ ಫಿಲ್ಟರ್ ಕಾಫಿ ಹಾಗೂ ಟೀ ಎಂದರೆ ಇಷ್ಟವಂತೆ. ಅದರಲ್ಲೂ ಟೀ ತುಂಬಾ ಚೆನ್ನಾಗಿ ಮಾಡುತ್ತಾರಂತೆ. ಅವರು ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಲ್ಲಿ ಪೀಕು ಸಿನಿಮಾದ ಪಾತ್ರ ತುಂಬಾ ಇಷ್ಟವಂತೆ. ಹೀಗೆ ಅಭಿಮಾನಿಗಳ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ದೀಪಿಕಾ. ತಮಗೆ ಅಪ್ರಾಮಾಣಿಕತೆ ಇಷ್ಟವಾಗುವುದಿಲ್ಲ ಎಂದಿರುವ ದೀಪಿಕಾ ತುಂಬಾ ಚೆನ್ನಾಗಿ ಟೀ ಮಾಡುತ್ತಾರಂತೆ.

Stay up to date on all the latest ಬಾಲಿವುಡ್ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp