ಮಿಡಿದ ಶಾರೂಕ್ ಹೃದಯ: ರೈಲ್ವೆ ನಿಲ್ದಾಣದಲ್ಲಿ ಮೃತ ತಾಯಿಯೊಂದಿಗೆ ಆಟವಾಡುತ್ತಿದ್ದ ಮಗುವಿಗೆ ಸಹಾಯ

ಬಿಹಾರದ ಮುಜಾಫರ್ ಪುರ್ ರೈಲ್ವೆ ನಿಲ್ದಾಣದಲ್ಲಿ ಮೃತ ತಾಯಿಯನ್ನು ಅರಿವೇ ಇಲ್ಲದ ಪುಟ್ಟ ಕಂದಮ್ಮ ಎಬ್ಬಿಸುತ್ತಿರುವ ವಿಡಿಯೊ ಮನಮಿಡಿಯುವಂತಿತ್ತು. ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು.
ಶಾರೂಕ್ ಖಾನ್, ಬಲ ಚಿತ್ರದಲ್ಲಿ ಮಗು
ಶಾರೂಕ್ ಖಾನ್, ಬಲ ಚಿತ್ರದಲ್ಲಿ ಮಗು

ನವದೆಹಲಿ: ಬಿಹಾರದ ಮುಜಾಫರ್ ಪುರ್ ರೈಲ್ವೆ ನಿಲ್ದಾಣದಲ್ಲಿ ಮೃತ ತಾಯಿಯನ್ನು ಅರಿವೇ ಇಲ್ಲದ ಪುಟ್ಟ ಕಂದಮ್ಮ ಎಬ್ಬಿಸುತ್ತಿರುವ ವಿಡಿಯೊ ಮನಮಿಡಿಯುವಂತಿತ್ತು. ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಇದೀಗ ಆ ಮಗುವಿನ ನೆರವಿಗೆ ಬಾಲಿವುಡ್ ನಟ ಶಾರೂಖ್ ಖಾನ್ ನಡೆಸುತ್ತಿರುವ ಸರ್ಕಾರೇತರ ಸಂಘಟನೆ ಮೀರ್ ಫೌಂಡೇಶನ್ ಬಂದಿದೆ.

ಲಾಕ್ ಡೌನ್ ಆದ ನಂತರ ದೇಶದಲ್ಲಿ ವಲಸೆ ಕಾರ್ಮಿಕರ ಸ್ಥಿತಿಗತಿಗೆ ಕನ್ನಡಿ ಹಿಡಿಯುವಂತಿತ್ತು ಈ ವಿಡಿಯೊ. ತಾಯಿಯನ್ನು ಕಳೆದುಕೊಂಡ ಆ ಪುಟ್ಟ ಮಗುವಿನ ಸಹಾಯಕ್ಕೆ ಬರುವುದಾಗಿ ಶಾರೂಕ್ ಖಾನ್ ಹೇಳಿದ್ದಾರೆ.ವಿಡಿಯೊ ವೈರಲ್ ಆಗುತ್ತಿದ್ದಂತೆ ಮೀರ್ ಫೌಂಡೇಶನ್ ಮಗುವನ್ನು ಪತ್ತೆಹಚ್ಚಿ ನೆರವಿಗೆ ಬಂದಿದೆ.

ಸದ್ಯ ಮಗು ಅದರ ತಾತನ ಆರೈಕೆಯಲ್ಲಿದೆ ಎಂದು ಮೀರ್ ಫೌಂಡೇಶನ್ ಟ್ವೀಟ್ ಮಾಡಿದ್ದು ಮಗು ಮತ್ತು ಆ ಮಗುವಿನ ಸೋದರ ತಮ್ಮ ತಾತ-ಅಜ್ಜಿ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದೆ.

ಇಡೀ ದೇಶ ಕೊರೋನಾ ಸೋಂಕಿಗೆ ಪರಿತಪಿಸುತ್ತಿರುವ ಸಂದರ್ಭದಲ್ಲಿ ಕೆಲವು ನಟರಂತೆ ಶಾರೂಕ್ ಖಾನ್ ಸಹ ಬಡವರು, ವಲಸೆ ಕಾರ್ಮಿಕರು, ಕೊರೋನಾ ವಾರಿಯರ್ಸ್ ಗಳ ನೆರವಿಗೆ ನಿಂತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com