ಕೊಚ್ಚಿಯಿಂದ ಒಡಿಶಾಗೆ  167 ವಲಸೆ ಕಾರ್ಮಿಕರನ್ನು ವಿಮಾನದಲ್ಲಿ ಕಳಿಸಿದ ಬಾಲಿವುಡ್ ನಟ ಸೋನು ಸೂದ್!

ಕೇರಳದ ಕೊಚ್ಚಿಯಲ್ಲಿ ಕೆಲಸ ಮಾಡುತ್ತಿದ್ದ 167 ಮಹಿಳಾ ಕಾರ್ಮಿಕರು ಚಾರ್ಟೆರ್ಡ್ ವಿಮಾನದಲ್ಲಿ ತಮ್ಮೂರು ಒಡಿಶಾಕ್ಕೆ ಹೋಗಿದ್ದಾರೆ.

Published: 29th May 2020 04:08 PM  |   Last Updated: 29th May 2020 04:50 PM   |  A+A-


Sonu Sood

ಸೋನು ಸೂದ್

Posted By : Sumana Upadhyaya
Source : The New Indian Express

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಕೆಲಸ ಮಾಡುತ್ತಿದ್ದ 167 ಮಹಿಳಾ ಕಾರ್ಮಿಕರು ಚಾರ್ಟೆರ್ಡ್ ವಿಮಾನದಲ್ಲಿ ತಮ್ಮೂರು ಒಡಿಶಾಕ್ಕೆ ಹೋಗಿದ್ದಾರೆ.

ಲಾಕ್ ಡೌನ್ ಕಾರಣದಿಂದ ಕೆಲಸವಿಲ್ಲದೆ ಹತಾಶೆಯಿಂದ ತಮ್ಮೂರಿಗೆ ಹೋಗಲು ಮಹಿಳಾ ಕಾರ್ಮಿಕರು ಹೋಗಲು ಕಾಯುತ್ತಿದ್ದರು. ವಿಶೇಷ ಶ್ರಮಿಕ ರೈಲಿನಲ್ಲಿ ಹೋಗಲು ಅವರಲ್ಲಿರುವ ಹಣವೂ ಖಾಲಿಯಾಗಿತ್ತು. ಇಂತಹ ಸಂದರ್ಭದಲ್ಲಿ ಅವರು ಚಾರ್ಟೆರ್ಡ್ ವಿಮಾನದಲ್ಲಿ ಹೇಗೆ ಹೋದರು ಅಂದುಕೊಂಡಿರಾ?

ಇದು ಸಾಧ್ಯವಾಗಿದ್ದು ಬಾಲಿವುಡ್ ನಟ ಸೋನು ಸೂದ್ ಅವರಿಂದ. ಮಹಿಳೆಯರ ಪಾಡು ನೋಡಿ ನಟ ಸೋನು ಸೂದ್ ಚಾರ್ಟೆರ್ಡ್ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿ ಕಳುಹಿಸಿದ್ದಾರೆ.ಕೊಚ್ಚಿ ವಿಮಾನ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಮಹಿಳಾ ಕಾರ್ಮಿಕರು ಹೊರಟು ಭುವನೇಶ್ವರಕ್ಕೆ ಬೆಳಗ್ಗೆ 10.30ಕ್ಕೆ ತಲುಪಿದ್ದಾರೆ.

150 ಮಹಿಳೆಯರೊಂದಿಗೆ ಇತರ 9 ಮರದ ಫ್ಯಾಕ್ಟರಿಯಲ್ಲಿರುವ ಇತರ ವಲಸೆ ಕಾರ್ಮಿಕರನ್ನು ಸಹ ವಿಮಾನದಲ್ಲಿ ಕಳುಹಿಸಿಕೊಡಲಾಯಿತು. ಇವರೆಲ್ಲರ ಪ್ರಯಾಣದ ಸಂಪೂರ್ಣ ವೆಚ್ಚವನ್ನು ಸೋನು ಸೂದ್ ಅವರೇ ಭರಿಸಿದ್ದಾರೆ.

ಸೋನು ಸೂದ್ ಅವರು ವಲಸೆ ಕಾರ್ಮಿಕರ ಸಹಾಯಕ್ಕೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು ಈ ಸಂಬಂಧ ವೆಬ್ ಸೈಟ್ ವೊಂದನ್ನು ಆರಂಭಿಸಿದ್ದಾರೆ. ತಮ್ಮ ಹೊಟೇಲ್ ನಲ್ಲಿ ಆರೋಗ್ಯಾಧಿಕಾರಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.

Stay up to date on all the latest ಬಾಲಿವುಡ್ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp