ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಸಮ್ಮನ್ಸ್ ಗೆ ಉತ್ತರ ಕೊಟ್ಟಿಲ್ಲ, ನಾಪತ್ತೆಯಾಗಿದ್ದಾರೆ: ಎನ್ ಸಿಬಿ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಖಾಸಗಿ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರು ಕೇಂದ್ರ ಅಪರಾಧ ವಿಭಾಗ(ಎನ್ ಸಿಬಿ)ದ ಸಮ್ಮನ್ಸ್ ಗೆ ಇದುವರೆಗೆ ಪ್ರತಿಕ್ರಿಯಿಸಿಲ್ಲ ಮತ್ತು ಅವರು ನಾಪತ್ತೆಯಾಗಿದ್ದಾರೆ ಎಂದು ಎನ್ ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Published: 02nd November 2020 11:04 AM  |   Last Updated: 02nd November 2020 11:04 AM   |  A+A-


Deepika Padukone and Karishma Prakash appeared before NCB

ಕಳೆದ ಬಾರಿ ದೀಪಿಕಾ ಪಡುಕೋಣೆ ಮತ್ತು ಕರಿಷ್ಮಾ ಪ್ರಕಾಶ್ ಎನ್ ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಸಂದರ್ಭ

Posted By : Sumana Upadhyaya
Source : ANI

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಖಾಸಗಿ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರು ಕೇಂದ್ರ ಅಪರಾಧ ವಿಭಾಗ(ಎನ್ ಸಿಬಿ)ದ ಸಮ್ಮನ್ಸ್ ಗೆ ಇದುವರೆಗೆ ಪ್ರತಿಕ್ರಿಯಿಸಿಲ್ಲ ಮತ್ತು ಅವರು ನಾಪತ್ತೆಯಾಗಿದ್ದಾರೆ ಎಂದು ಎನ್ ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸಿಕ್ಕಿರುವ ಡ್ರಗ್ಸ್ ಗೆ ಸಂಬಂಧಪಟ್ಟಂತೆ ಕರಿಷ್ಮಾ ಪ್ರಕಾಶ್ ಇನ್ನೂ ಎನ್ ಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ತಿಂಗಳು ಅಕ್ಟೋಬರ್ 27ರಂದು ಕರಿಷ್ಮಾ ಪ್ರಕಾಶ್ ಅವರಿಗೆ ಎನ್ ಸಿಬಿ ಡ್ರಗ್ ಕೇಸಿಗೆ ಸಂಬಂಧಪಟ್ಟಂತೆ ಸಮ್ಮನ್ಸ್ ನೀಡಿತ್ತು. ಕರಿಷ್ಮಾ ಪ್ರಕಾಶ್ ನಿವಾಸದಲ್ಲಿ ಶೋಧ ನಡೆಸಿದ ಎನ್ ಸಿಬಿ ಅಧಿಕಾರಿಗಳಿಗೆ 1.7 ಗ್ರಾಂ ಚರಸ್ ಮತ್ತು ಎರಡು ಬಾಟಲ್ ಸಿಬಿಡಿ ಎಣ್ಣೆ ಸಿಕ್ಕಿದೆ.

ಪ್ರಾಥಮಿಕ ತನಿಖೆಯಿಂದ ಕರಿಷ್ಮಾ ಪ್ರಕಾಶ್ ಗೆ ಡ್ರಗ್ ಪೆಡ್ಲರ್ ಗಳ ಜೊತೆ ನಿರಂತರ ಸಂಪರ್ಕವಿತ್ತು ಎಂದು ಕಂಡುಬಂದಿದ್ದು ಇದಕ್ಕಾಗಿ ಸಮ್ಮನ್ಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಡ್ರಗ್ ಬಳಕೆ ಕುರಿತು ಕರಿಷ್ಮಾ ಪ್ರಕಾಶ್ ವಿಚಾರಣೆ ಎದುರಿಸಿದ್ದರು.

ನಟಿಯರಾದ ರಾಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ಸಾರಾ ಆಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಅವರನ್ನು ಸಹ ಡ್ರಗ್ ಬಳಕೆ ಕೇಸಿಗೆ ಸಂಬಂಧಪಟ್ಟಂತೆ ಎನ್ ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಕ್ವಾನ್ ಟಾಲೆಂಟ್ ಕಂಪೆನಿಗೆ ಸಮ್ಮನ್ಸ್: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಡ್ರಗ್ ಕೇಸು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದಾಯಿತು. ಸುಶಾಂತ್ ಸಿಂಗ್ ಅವರ ಟ್ಯಾಲೆಂಟ್ ಮ್ಯಾನೇಜರ್ ಜಯ ಸಹ ಮುಂಬೈಯ ಕ್ವಾನ್ ಟ್ಯಾಲೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು ಅವರು ಕರಿಷ್ಮಾ ಪ್ರಕಾಶ್ ಹೆಸರು ಹೇಳಿದ್ದರು. ಕರಿಷ್ಮಾ ಪ್ರಕಾಶ್ ಕ್ವಾನ್ ಕಂಪೆನಿ ಜೊತೆ ನಿಕಟ ಸಂಪರ್ಕ ಇರಿಸಿಕೊಂಡಿದ್ದಾರೆ.

Stay up to date on all the latest ಬಾಲಿವುಡ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp