ಧರ್ಮಶಾಲಾದಲ್ಲಿ ಬಾಲಿವುಡ್ ಹಿರಿಯ ನಟ ಅಸಿಫ್ ಬಸ್ರಾ ಶವವಾಗಿ ಪತ್ತೆ, ಆತ್ಮಹತ್ಯೆ ಶಂಕೆ
ಬಾಲಿವುಡ್ ಹಿರಿಯ ನಟ ಆಸಿಫ್ ಬಸ್ರಾ(53) ಅವರು ಗುರುವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರು ಶಂಕೆ ವ್ಯಕ್ತವಾಗಿದೆ.
Published: 12th November 2020 05:44 PM | Last Updated: 12th November 2020 05:44 PM | A+A A-

ಆಸಿಫ್ ಬಸ್ರಾ
ಧರ್ಮಶಾಲಾ: ಬಾಲಿವುಡ್ ಹಿರಿಯ ನಟ ಆಸಿಫ್ ಬಸ್ರಾ(53) ಅವರು ಗುರುವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರು ಶಂಕೆ ವ್ಯಕ್ತವಾಗಿದೆ.
53 ವರ್ಷದ ಆಸಿಫ್ ಬಸ್ರಾ ಸಾವಿಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾ ಕೆಫೆ ಬಳಿ ಆಸಿಫ್ ಅವರ ಶವ ಪತ್ತೆಯಾಗಿದೆ.
'ಪಾಟಾಲ್ ಲೋಕ್' ಎಂಬ ವೆಬ್ ಸರಣಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ನಟ ಆಸಿಫ್ ಬಸ್ರಾ ಅವರ ಶವ ಖಾಸಗಿ ಅತಿಥಿಗೃಹವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು, ವಿಧಿ ವಿಜ್ಞಾನ ತಂಡ ತನಿಖೆ ಆರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಮುಕ್ತ್ ರಂಜನ್ ತಿಳಿಸಿದ್ದಾರೆ.