ದುರ್ಗಾ ಪೂಜೆ ಪೆಂಡಾಲ್ ನಲ್ಲಿ ಪ್ರತಿಮೆ: ಇದು ನನ್ನ ಜೀವನದ ಅತಿ ದೊಡ್ಡ ಬಹುಮಾನ: ಸೋನು ಸೂದ್ ಪ್ರತಿಕ್ರಿಯೆ

ಉತ್ತರ ಭಾರತದಲ್ಲಿ ನವರಾತ್ರಿ ಸಂದರ್ಭ ಅದ್ಧೂರಿಯಾಗಿ ದುರ್ಗಾ ಪೂಜೆ ನಡೆಯುತ್ತಿದ್ದು, ಈ ಬಾರಿ ಪೆಂಡಾಲ್‌ಗಳಲ್ಲಿ ಬಾಲಿವುಡ್ ನಟ ಸೋನು ಸೂದ್ ಪ್ರತಿಮೆಗಳು ಕಂಗೊಳಿಸಿವೆ. 
ಸೋನು ಸೂದ್ ಪ್ರತಿಮೆ
ಸೋನು ಸೂದ್ ಪ್ರತಿಮೆ

ಕೊಲ್ಕೋತಾ: ಉತ್ತರ ಭಾರತದಲ್ಲಿ ನವರಾತ್ರಿ ಸಂದರ್ಭ ಅದ್ಧೂರಿಯಾಗಿ ದುರ್ಗಾ ಪೂಜೆ ನಡೆಯುತ್ತಿದ್ದು, ಈ ಬಾರಿ ಪೆಂಡಾಲ್‌ಗಳಲ್ಲಿ ಬಾಲಿವುಡ್ ನಟ ಸೋನು ಸೂದ್ ಪ್ರತಿಮೆಗಳು ಕಂಗೊಳಿಸಿವೆ. 

ಕೊರೋನಾ ಲಾಕ್ ಡೌನ್  ಸಂದರ್ಭದಲ್ಲಿ  ಭಾರತದಲ್ಲಾದ ಕಾರ್ಮಿಕರ ಸಂಕಷ್ಟದಲ್ಲಿ ನೆರವಿಗೆ ಬಂದ ನಟ ಸೋನು  ಅವರ ಪ್ರತಿಮೆಗಳನ್ನು ಕೊಲ್ಕತ್ತಾದ ದುರ್ಗಾಪೂಜೆಯ ಪೆಂಡಾಲ್‌ಗಳ ಥೀಮ್ ಆಗಿದೆ. ಲಾಕ್‌ಡೌನ್‌ನಲ್ಲಿ ಕಾರ್ಮಿಕರಿಗೆ ಊರು ಸೇರಲು ನೆರವಾದ ಸೋನು ಸೂದ್‌ಗೆ ಗೌರವ ಸೂಚಿಸಲಾಗಿದ್ದು, ನಟನ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ.

ನಾವು ಈ ಬಾರಿ ಸೋನು ಸೂದ್ ಪ್ರತಿಮೆ ಸ್ಥಾಪಿಸಿದ್ದೇವೆ. ಈ ಮೂಲಕ ಜನರಿಗೆ ಕಷ್ಟದಲ್ಲಿರುವವರಿಗೆ ನೆರವಾಗಲು ಸ್ಫೂರ್ತಿಯಾಗಲಿ ಎಂದು ಕೊಲ್ಕತ್ತಾದ ಪ್ರಫುಲ್ಲ ವೆಲ್ಫೇರ್ ಅಸೋಸಿಯೇಷನ್‌ನ ಸದಸ್ಯ ಶ್ರಿಂಜಯ್ ದತ್ತ ಆವರು ಹೇಳಿದ್ದಾರೆ. 

ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸಾವಿರಾರು ಕಾರ್ಮಿಕರಿಗೆ ತಮ್ಮ ಊರು ಸೇರಿಕೊಳ್ಳಲು ಸೋನು ಸೂದ್ ನೆರವಾಗಿದ್ದರು. ಆ ನಂತರ ಬಹಳಷ್ಟು ಜನರಿಗೆ ಹಲವು ರೀತಿಯಲ್ಲಿ ನಟ ನೆರವಾಗುತ್ತಲೇ ಇದ್ದಾರೆ.

ಇನ್ನೂ ಈ ಗೌರವದ ಬಗ್ಗೆ ಪ್ರತಿಕ್ರಿಯಿಸಿರುವ ನಟ ಸೋನು ಸೂದ್ ಇದು ನನ್ನ ಜೀವನದಲ್ಲೇ ಅತಿ ದೊಡ್ಡ ಬಹುಮಾನ ಎಂದು ಹೇಳಿದ್ದಾರೆ. "ಅವರ ಮುಖದಲ್ಲಿ ನಗುವನ್ನು ಹಾಕುವುದು ಅತ್ಯಂತ ವಿಶೇಷವಾದ ಭಾವನೆ. ಯಾವುದೇ ಬ್ಲಾಕ್ ಬಸ್ಟರ್ ಸಿನಿಮಾ ನನಗೆ ಅಂತಹ ಭಾವನೆಯನ್ನು ನೀಡಿಲ್ಲ, ಸರ್ಕಾರ ಅಥವಾ ಇತರ ವ್ಯಕ್ತಿಗಳನ್ನು ದೂಷಿಸುವುದು ಸುಲಭ, ಆದರೆ ನನ್ನ ಕೆಲಸ ನಾನು ಮಾಡಬೇಕು ಎಂಬ ಉದ್ದೇಶವನ್ನು ನಾನು ನಂಬುತ್ತೇನೆ ಎಂದು ಸೋನು ಸೂದ್ ಈ ಹಿಂದೆ ನಡೆದ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಸೆಪ್ಟಂಬರ್ ತಿಂಗಳಲ್ಲಿ ಯುನೈಟೆಡ್ ನೇಷನ್ಸ್ ಡೆವಲಪ್ ಮೆಂಟ್ ಪ್ರೋಗ್ರಾಮ್ ನೀಡುವ ಪ್ರತಿಷ್ಠಿತ ವಿಶೇಷ ಮಾನವೀಯತೆ ಪ್ರಶಸ್ತಿಗೂ ಸೋನು ಸೂದ್ ಭಾಜನರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com